ಸೈಬರ್ ಸೆಕ್ಯುರಿಟಿಯಲ್ಲಿ ಅತ್ಯುತ್ತಮ ಕೇಂದ್ರ(CySecK): ಸೈಬರ್ ಸೆಕ್ಯುರಿಟಿ ಸಾಫ್ಟ್ವೇರ್ ನಿರ್ಧಾರಿತ ನೆಟ್‌ವರ್ಕ್‌ನ ಅಭಿವೃದ್ಧಿ” ಕುರಿತು ಆನ್‌ಲೈನ್ ವೆಬಿನಾರ್ - ಸಂಗಚ್ಛಧ್ವಂ ಸರಣಿ ವೆಬಿನಾರ್ 6
Date/s: 30 Apr 2020
Venue: Zoho
Organising Partners: ಅತ್ಯುತ್ತಮ ಕೇಂದ್ರ(CySecK) & Cisco ನ
ಸಂಗಚ್ಛಧ್ವಂ ಸರಣಿ ವೆಬಿನಾರ್ ಭಾಗವಾಗಿ CySecK ವಿದ್ಯಾರ್ಥಿಗಳು / ಅಧ್ಯಾಪಕರು / ವೃತ್ತಿನಿರತರರಿಗೆ “ಸೈಬರ್‌ಸೆಕ್ಯೂರಿಟಿ: ಸಾಫ್ಟ್ವೇರ್ ನಿರ್ಧಾರಿತ ನೆಟ್‌ವರ್ಕ್‌ನ ಅಭಿವೃದ್ಧಿ” ಎಂಬ ವಿಷಯದ ಕುರಿತು ಉಚಿತ ವೆಬ್‌ನಾರ್ ನಡೆಸುತ್ತಿದೆ. ಈ ವೆಬಿನಾರನ್ನು Cisco ನ ಪಾಲುದಾರಿಕೆಯಲ್ಲಿ ನಡೆಸಲಾಗುತ್ತದೆ.
ಸಣ್ಣ ಪರಿಚಯ:
ಸಾಫ್ಟ್ವೇರ್-ಡಿಫೈನ್ಡ್ ನೆಟ್‌ವರ್ಕಿಂಗ್ (ಎಸ್‌ಡಿಎನ್) ಎಂಬುದು ನೆಟ್‌ವರ್ಕ್ ಅನ್ನು ಹೆಚ್ಚು ಸಲೀಸಾಗಿ ಸುಲಭವಾಗಿ ನಿರ್ವಹಿಸಲಾಗುವಂತೆ ಮಾಡುವ ಒಂದು ರಚನೆಯ ವಿನ್ಯಾಸವಾಗಿದೆ. ನಿರ್ದಿಷ್ಟ(ಡಿಸ್ಕ್ರೀಟ್) ನೆಟ್‌ವರ್ಕಿಂಗ್ ಸಾಧನಗಳಲ್ಲಿ ಡೇಟಾ ಫಾರ್ವರ್ಡ್ ಕಾರ್ಯದಿಂದ ಕಂಟ್ರೋಲ್ ಪ್ಲೇನನ್ನು ಅಮೂರ್ತಗೊಳಿಸುವ(ಅಬ್ಸ್ಟ್ರಾಕ್ಟ್) ಮೂಲಕ ಎಸ್‌ಡಿಎನ್ ನಿರ್ವಹಣೆಯನ್ನು (ಮ್ಯಾನೇಜ್ಮೆಂಟನ್ನು) ಕೇಂದ್ರೀಕರಿಸುತ್ತದೆ.
ಇದು ಯಾರಿಗೆ?:
ಮೂಲ ಪ್ರೋಗ್ರಾಮಿಂಗ್ ತಿಳಿವಳಿಕೆಯಿರುವ ಮತ್ತು ಆಟೊಮೇಷನ್ ಬಗ್ಗೆ ಗಾಢ ಒಲವಿರುವ ಹಾಗೂ ಇಂದು ಮತ್ತು ಮುಂದೆಯೂ ನೆಟ್‌ವರ್ಕ್‌ಗಳನ್ನು ಸರಳಗೊಳಿಸುವಲ್ಲಿ ಉತ್ಸಾಹ ಹೊಂದಿದವರಿಗೆ
- ಮೂಲ ಪ್ರೋಗ್ರಾಮಿಂಗ್ ಪರಿಣಿತಿಯಿರುವ ಇಂಜಿನಿಯರ್‌ಗಳು
- ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರುಗಳು ಮತ್ತು ಮ್ಯಾನೇಜರುಗಳು
- ಡೇಟಾ ಸೆಂಟರ್ ಅಡ್ಮಿನಿಸ್ಟ್ರೇಟರುಗಳು ಮತ್ತು ಮ್ಯಾನೇಜರುಗಳು
ಪ್ರಯೋಜನಗಳು ಮತ್ತು ಕಲಿಕೆ:
- ಮುಂಬರುವ ನೆಟ್‌ವರ್ಕ್‌ಗಳ ಆಳನೋಟವನ್ನು ಪಡೆಯುವುದು.
- ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಸೇವೆಗಳನ್ನು ಇನ್ನೂ ಸುಧಾರಿಸಲು ಅಟೊಮೇಷನ್ ಶಕ್ತಿಯ ತಿಳಿವಳಿಕೆ
- ನೆಟ್ವರ್ಕಿನ ಸಂಕೀರ್ಣತೆಗಳನ್ನು ನಿವಾರಿಸುವುದು.
- ಎಸ್‌ಡಿಎನ್‌ನಲ್ಲಿ ಸೆಕ್ಯುರಿಟಿ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆಂಬುದರ ಬಗ್ಗೆ ತಿಳಿವಳಿಕೆ.
ದಿನಾಂಕ: 30 ಏಪ್ರಿಲ್ 2020
ಸಮಯ: ಸಂಜೆ 4:30 ರಿಂದ 6:00
ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.
ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು ನೀಡಲಾಗುವುದು.