ಸೈಬರ್ ಸೆಕ್ಯುರಿಟಿಯಲ್ಲಿ ಅತ್ಯುತ್ತಮ ಕೇಂದ್ರ(CySecK): ಸೈಬರ್‌ ಸೆಕ್ಯುರಿಟಿ ಸಾಫ್ಟ್ವೇರ್ ನಿರ್ಧಾರಿತ ನೆಟ್‌ವರ್ಕ್‌ನ ಅಭಿವೃದ್ಧಿ” ಕುರಿತು ಆನ್‌ಲೈನ್ ವೆಬಿನಾರ್ - ಸಂಗಚ್ಛಧ್ವಂ ಸರಣಿ ವೆಬಿನಾರ್ 6

Date/s: 30 Apr 2020

Venue: Zoho

Organising Partners: ಅತ್ಯುತ್ತಮ ಕೇಂದ್ರ(CySecK) & Cisco ನ


ಸಂಗಚ್ಛಧ್ವಂ ಸರಣಿ ವೆಬಿನಾರ್ ಭಾಗವಾಗಿ CySecK   ವಿದ್ಯಾರ್ಥಿಗಳು / ಅಧ್ಯಾಪಕರು /  ವೃತ್ತಿನಿರತರರಿಗೆ “ಸೈಬರ್‌ಸೆಕ್ಯೂರಿಟಿ: ಸಾಫ್ಟ್ವೇರ್ ನಿರ್ಧಾರಿತ  ನೆಟ್‌ವರ್ಕ್‌ನ ಅಭಿವೃದ್ಧಿ” ಎಂಬ ವಿಷಯದ ಕುರಿತು ಉಚಿತ ವೆಬ್‌ನಾರ್ ನಡೆಸುತ್ತಿದೆ. ಈ ವೆಬಿನಾರನ್ನು Cisco ನ ಪಾಲುದಾರಿಕೆಯಲ್ಲಿ ನಡೆಸಲಾಗುತ್ತದೆ.

ಸಣ್ಣ ಪರಿಚಯ:

ಸಾಫ್ಟ್ವೇರ್-ಡಿಫೈನ್ಡ್ ನೆಟ್‌ವರ್ಕಿಂಗ್ (ಎಸ್‌ಡಿಎನ್) ಎಂಬುದು ನೆಟ್‌ವರ್ಕ್ ಅನ್ನು ಹೆಚ್ಚು ಸಲೀಸಾಗಿ   ಸುಲಭವಾಗಿ ನಿರ್ವಹಿಸಲಾಗುವಂತೆ ಮಾಡುವ ಒಂದು ರಚನೆಯ ವಿನ್ಯಾಸವಾಗಿದೆ.   ನಿರ್ದಿಷ್ಟ(ಡಿಸ್ಕ್ರೀಟ್) ನೆಟ್‌ವರ್ಕಿಂಗ್ ಸಾಧನಗಳಲ್ಲಿ ಡೇಟಾ ಫಾರ್ವರ್ಡ್ ಕಾರ್ಯದಿಂದ ಕಂಟ್ರೋಲ್ ಪ್ಲೇನನ್ನು  ಅಮೂರ್ತಗೊಳಿಸುವ(ಅಬ್ಸ್ಟ್ರಾಕ್ಟ್)  ಮೂಲಕ ಎಸ್‌ಡಿಎನ್ ನಿರ್ವಹಣೆಯನ್ನು (ಮ್ಯಾನೇಜ್ಮೆಂಟನ್ನು) ಕೇಂದ್ರೀಕರಿಸುತ್ತದೆ.

ಇದು ಯಾರಿಗೆ?:

ಮೂಲ ಪ್ರೋಗ್ರಾಮಿಂಗ್ ತಿಳಿವಳಿಕೆಯಿರುವ ಮತ್ತು ಆಟೊಮೇಷನ್ ಬಗ್ಗೆ ಗಾಢ ಒಲವಿರುವ  ಹಾಗೂ  ಇಂದು ಮತ್ತು ಮುಂದೆಯೂ ನೆಟ್‌ವರ್ಕ್‌ಗಳನ್ನು ಸರಳಗೊಳಿಸುವಲ್ಲಿ  ಉತ್ಸಾಹ ಹೊಂದಿದವರಿಗೆ

  1. ಮೂಲ ಪ್ರೋಗ್ರಾಮಿಂಗ್ ಪರಿಣಿತಿಯಿರುವ ಇಂಜಿನಿಯರ್‌ಗಳು
  2. ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರುಗಳು ಮತ್ತು ಮ್ಯಾನೇಜರುಗಳು
  3. ಡೇಟಾ ಸೆಂಟರ್ ಅಡ್ಮಿನಿಸ್ಟ್ರೇಟರುಗಳು ಮತ್ತು ಮ್ಯಾನೇಜರುಗಳು

ಪ್ರಯೋಜನಗಳು ಮತ್ತು ಕಲಿಕೆ:

  1. ಮುಂಬರುವ ನೆಟ್‌ವರ್ಕ್‌ಗಳ ಆಳನೋಟವನ್ನು ಪಡೆಯುವುದು.
  2. ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಸೇವೆಗಳನ್ನು ಇನ್ನೂ ಸುಧಾರಿಸಲು ಅಟೊಮೇಷನ್ ಶಕ್ತಿಯ ತಿಳಿವಳಿಕೆ
  3. ನೆಟ್ವರ್ಕಿನ ಸಂಕೀರ್ಣತೆಗಳನ್ನು ನಿವಾರಿಸುವುದು.
  4. ಎಸ್‌ಡಿಎನ್‌ನಲ್ಲಿ ಸೆಕ್ಯುರಿಟಿ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆಂಬುದರ ಬಗ್ಗೆ ತಿಳಿವಳಿಕೆ.

ದಿನಾಂಕ: 30 ಏಪ್ರಿಲ್ 2020

ಸಮಯ: ಸಂಜೆ 4:30 ರಿಂದ 6:00

ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.

ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ  ಸಾಧನಾ ಪ್ರಮಾಣಪತ್ರವನ್ನು ನೀಡಲಾಗುವುದು.