"ಹೋಲಿಸ್ಟಿಕ್ ಎಂಡ್‌ಪಾಯಿಂಟ್ ಸೆಕ್ಯುರಿಟಿ" ಸಂಗಚ್ಛಧ್ವಂ ಸರಣಿ ವೆಬಿನಾರ್ 17

Date/s: 15 Jul 2020

Venue: Zoho

Organising Partners: ಸಂಘಟನಾ ಪಾಲುದಾರರು: ಸೈಸೆಕ್ ಮತ್ತು ಮ್ಯಾಕಫಿ


ವೆಬಿನಾರ್‌ಗಳ  ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK )  – “ಹೋಲಿಸ್ಟಿಕ್ ಎಂಡ್‌ಪಾಯಿಂಟ್ ಸೆಕ್ಯುರಿಟಿ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರ್ ಮ್ಯಾಕಫಿಯ ಸಹಭಾಗಿತ್ವದಲ್ಲಿದೆ.

ಸಮಯ: ಸಂಜೆ 5:00 ರಿಂದ 6:30

ಸಂಕ್ಷಿಪ್ತ ಪರಿಚಯ:

“ಹೋಲಿಸ್ಟಿಕ್ ಎಂಡ್-ಪಾಯಿಂಟ್ ಸೆಕ್ಯುರಿಟಿ” ವೆಬಿನಾರಿನಲ್ಲಿ  ಭಾಗವಹಿಸುವವರಿಗೆ ಸಾಫ್ಟ್ವೇರ್ ಸೆಕ್ಯುರಿಟಿ ಇಕೋ ಸಿಸ್ಟಮ್, ಎಂಡ್‌ಪಾಯಿಂಟ್ ಸೆಕ್ಯುರಿಟಿಯ ಪ್ರಾಮುಖ್ಯತೆ ಮತ್ತು ಅಪಾಯ ಸ್ವರೂಪಗಳ  ಬಗ್ಗೆ ಅರಿವು ಮೂಡಿಸಲಾಗುತ್ತದೆ.

ದಾಳಿ ( ಅಟ್ಯಾಕ್) ಪಾಯಿಂಟ್‌ಗಳು, ಎಂಡ್‌ಪಾಯಿಂಟ್ ಸೆಕ್ಯುರಿಟಿ ಮಾಡೆಲ್‌ಗಳು, ಮಾಡೆಲಿನ  ಸೂಕ್ಷ್ಮ  ಅಂಶಗಳು ಮತ್ತು ಉತ್ತಮ ಕಾರ್ಯಾಚರಣೆಗಳ  (ಸಾಮಾನ್ಯ ಎಂಡ್‌ಪಾಯಿಂಟ್ ಬಳಕೆದಾರರ ದೃಷ್ಟಿಯಿಂದ) ಬಗ್ಗೆ ನಾವು ತಿಳಿವಳಿಕೆ ನೀಡುತ್ತೇವೆ. ಉದ್ದಿಮೆ  ಸೆಕ್ಯುರಿಟಿ ದೃಷ್ಟಿಯಿಂದ ನಾವು ಸೆಕ್ಯುರಿಟಿ ಕಾಳಜಿಗಳು ಮತ್ತು ಬಯಸುವ ಫಲಿತಾಂಶಗಳ ಬಗ್ಗೆ ಹೇಳುತ್ತೇವೆ.

ನಮ್ಮ ಗ್ರಾಹಕರನ್ನು ರಕ್ಷಿಸಲು ಸೂಟ್ ಹೇಗೆ ಮುಖ್ಯ ಮತ್ತು ಅದು ಹೇಗೆ ಕಾಲಾನಂತರದಲ್ಲಿ ವಿಕಸನಗೊಂಡಿದೆ ಎಂದು ಮ್ಯಾಕಫಿ  ಎಂಡ್‌ಪಾಯಿಂಟ್ ಸೆಕ್ಯುರಿಟಿ ಸೂಟ್‌ಗಳ ಬಗ್ಗೆ ಭಾಗವಹಿಸುವವರಿಗೆ ನಾವು ತಿಳಿವಳಿಕೆ ನೀಡುತ್ತೇವೆ.ಇದರಲ್ಲಿ     ನಾವು  ಮುಂದುವರೆದ ಅಪಾಯ ರಕ್ಷಣಾ ಕಾರ್ಯವಿಧಾನಗಳು, ದುರ್ಬಲತೆ ನಿರ್ವಹಣೆ / ಹೊಂದಾವಣೆ ಅಥವಾ ಅಂಗೀಕಾರ ಮತ್ತು ಇಡಿಆರ್ (ಎಂಡ್-ಪಾಯಿಂಟ್ ಡಿಟೆಕ್ಷನ್ ಮತ್ತು  ರೆಸ್ಪಾನ್ಸ್) ನಂತಹ ಮುಂದಿನ ಪೀಳಿಗೆಯ ಸೆಕ್ಯುರಿಟಿ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಬಗ್ಗೆ ಮಾತನಾಡುತ್ತೇವೆ.

ಇದು ಯಾರಿಗೆ:

ಸಾಫ್ಟ್ವೇರ್ ಸೆಕ್ಯುರಿಟಿ ಬಗ್ಗೆ ಉನ್ನತ ಮಟ್ಟದ ತಿಳುವಳಿಕೆಯನ್ನು ಹೊಂದಿರುವ ಎಂಜಿನಿಯರಿಂಗ್ ಪದವಿ ಓದುತ್ತಿರುವವರು ಮತ್ತು ಎಂಡ್‌ಪಾಯಿಂಟ್ ಸೆಕ್ಯುರಿಟಿಯ 101 ಮತ್ತು   ಸಾಫ್ಟ್ವೇರ್ ಸೆಕ್ಯುರಿಟಿ-ಸಿಸ್ಟಂಗಳ  ಭವಿಷ್ಯದ ಬಗ್ಗೆ ಮತ್ತು ಟ್ರೆಂಡ್‌ಗಳ ಬಗ್ಗೆ ಮುಂಚಿತವಾಗಿ ಕಲಿಯಲು ಆಸಕ್ತಿ ಹೊಂದಿರುವವರು.

ಗಮನಿಸಿ:     ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು  ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.