"ವಿದ್ಯುತ್ ಮತ್ತು ಶಕ್ತಿ ಅಡಿಗಟ್ಟಿಗೆ ಸೈಬರ್ ಸೆಕ್ಯುರಿಟಿ" ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 15
Date/s: 01 Jul 2020
Organising Partners: ಸಂಘಟನಾ ಪಾಲುದಾರರು: ಸೈಸೆಕ್
ಸೈಸೆಕ್ – ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ – “ವಿದ್ಯುತ್ ಮತ್ತು ಶಕ್ತಿ ಅಡಿಗಟ್ಟಿಗೆ ಸೈಬರ್ ಸೆಕ್ಯುರಿಟಿ” ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಧಾರವಾಡದ IITನ ಪ್ರೊ. ಅಭಿಜಿತ್ ಕ್ಷೀರಸಾಗರ್ ನಡೆಸಿಕೊಡಲಿದ್ದಾರೆ.
ದಿನಾಂಕ: 1 ಜೂಲೈ 2020
ಸಮಯ: ಸಂಜೆ 5:00 ರಿಂದ 6:30
ಸಂಕ್ಷಿಪ್ತ ಪರಿಚಯ:
ವಿದ್ಯುತ್ ಶಕ್ತಿ ಅಡಿಗಟ್ಟು ಅಂದರೆ ಎಲೆಕ್ಟ್ರಿಕ್ ಗ್ರಿಡ್ ಎಂಬುದು ನಮ್ಮ ರಾಷ್ಟ್ರೀಯ ಪ್ರಾಮುಖ್ಯತೆಯ ಅತ್ಯಂತ ದೊಡ್ಡ ಸೈಬರ್-ಘನ ವ್ಯವಸ್ಥೆಯಾಗಿದೆ. ಇತರ ಸೈಬರ್-ಘನ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಈ ವ್ಯವಸ್ಥೆಯ ಗಾತ್ರ ಮತ್ತು ಘನಪ್ರಮಾಣ, ವಿಶ್ವಾಸಾರ್ಹತೆ ಕುರಿತು ಕಾಳಜಿಗಳು ಮತ್ತು ಸಾರ್ವಜನಿಕ ಉಪಯುಕ್ತ ಸ್ಥಾನದಿಂದ ಅದರ ವ್ಯವಸ್ಥೆಯ ( ಸಿಸ್ಟಮ್ ) ಸುರಕ್ಷತೆಗೆ ಕುರಿತಂತೆ ಕೆಲವು ವಿಶಿಷ್ಟ ಸವಾಲುಗಳು ಎದುರಾಗುತ್ತವೆ. ಘನಸ್ವತ್ತಿನ ಮಟ್ಟದಲ್ಲಿ ಈ ವ್ಯವಸ್ಥೆಯು ಬಹಳಷ್ಟು ಸಾಧನಗಳನ್ನು ಹೊಂದಿದ್ದರೂ, ಇತ್ತೀಚಿನ ಟ್ರೆಂಡುಗಳಾದ ನವೀಕರಿಸಬಹುದಾದ ಶಕ್ತಿ ಇರುವಿಕೆ , ವಿದ್ಯುತ್ ಗಾಡಿ ಮೇಲೇರಿಕೆ ಮತ್ತು ವಿದ್ಯುತ್ ಲೋಡ್‌ಗಳ ವಿಕಸನ (ಮೈಕ್ರೊಗ್ರಿಡ್‌ಗಳು) ಇತ್ಯಾದಿಗಳು ನಾವು ಇನ್ನೂ ಅರ್ಥಮಾಡಿಕೊಳ್ಳದಿರುವ ಸೈಬರ್-ಸೆಕ್ಯುರಿಟಿಗೆ ಸಂಬಂಧಪಟ್ಟಂತೆ ಸವಾಲುಗಳನ್ನು ಉಂಟುಮಾಡಿವೆ. ಈ ಭಾಷಣದಲ್ಲಿ ಸೈಬರ್-ಘನ ವ್ಯವಸ್ಥೆವಾಗಿ ಗ್ರಿಡ್ ರಚನೆ, ಈಗಿರುವ ಸೈಬರ್-ಘನ ಸೆಕ್ಯುರಿಟಿ ಮಾದರಿಗಳು, ಅಪಾಯಗಳು ಮತ್ತು ಪರಿಹಾರಗಳನ್ನು ಪರಿಚಯಿಸಲಾಗುತ್ತದೆ ಮತ್ತು ಕೆಲವು ಪ್ರಕರಣ -ಅಧ್ಯಯನಗಳು ಮತ್ತು ನೈಜ ಉದಾಹರಣೆಗಳ ಮೂಲಕ ಗ್ರಿಡ್ ವಿಕಸನಗೊಳ್ಳುವಾಗ ಎದುರಾಗುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳನ್ನು ವಿವರಿಸಲಾಗುತ್ತದೆ.
ಇದು ಯಾರಿಗೆ:
ಪವರ್-ಗ್ರಿಡ್ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಮೂಲ ತಿಳುವಳಿಕೆ ಇರುವವರಿಗೆ ಮತ್ತು ಕಂಪ್ಯೂಟರ್ ಸಂಪರ್ಕ ವ್ಯವಸ್ಥೆಗಳ ಮೂಲ ತಿಳಿವಳಿಕೆ ಇರುವವರಿಗೆ ಇದು ಹೆಚ್ಚು ಅಪೇಕ್ಷಣೀಯ.
ಗಮನಿಸಿ: ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.