“ಮೈಟರ್ ಎಟಿಟಿ ಮತ್ತು ಸಿಕೆ (MITRE ನ ATT & CK )ಫ್ರೇಮ್‌ವರ್ಕ್ ಪರಿಚಯ” ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 14

Date/s: 24 Jun 2020

Organising Partners: ಸಂಘಟನಾ ಪಾಲುದಾರರು: ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ, ಕರ್ನಾಟಕ ಸರ್ಕಾರ


ವೆಬಿನಾರ್‌ಗಳ  ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK )  “ಮೈಟರ್ ಎಟಿಟಿ ಮತ್ತು ಸಿಕೆ (MITRE ನ ATT & CK ) ಫ್ರೇಮ್‌ವರ್ಕ್ ಪರಿಚಯ”    ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಶ್ರೀ. ಕಿರ್ತಾರ್ ಓಜಾ   ನಡೆಸಿಕೊಡಲಿದ್ದಾರೆ.

ದಿನಾಂಕ: 24 ಜೂನ್ 2020

ಸಮಯ: ಸಂಜೆ 5:00 ರಿಂದ 6:30

ಸಂಕ್ಷಿಪ್ತ ಪರಿಚಯ:

ಕಾಣುವಂತೆ ಮಾಡುವುದು ಸೈಬರ್ ರಕ್ಷಣೆ ಕಾರ್ಯಕ್ರಮದ ಪ್ರಮುಖ ಅಂಶ.  ಒಮ್ಮೆ ಕಾಣುವಂತೆ ಮಾಡಿದರೆ , ಅದರ ಮೇಲೆ ಪತ್ತೆ ತರ್ಕ(ಲಾಜಿಕ್ ) ವನ್ನು ಉಂಟು ಮಾಡುವುದು ಮುಖ್ಯ.

ಕಳೆದ ಕೆಲವು ವರ್ಷಗಳಿಂದ MITRE ನ ATT & CK ಫ್ರೇಮ್‌ವರ್ಕ್   ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದು ಸೈಬರ್-ಬೆದರಿಕೆ-ಪತ್ತೆ ಸಾಮರ್ಥ್ಯವನ್ನು ರಚಿಸಲು ಅದು ಸಹಜ ಮಾನದಂಡವಾಗಿದೆ. ಸೈಬರ್- ನಾಶ ದಾಳಿ ಸರಪಳಿಯ ಪ್ರತಿ ಹಂತದಲ್ಲಿ  ಅಪಾಯಗಳು/ಬೆದರಿಕೆ ಕ್ರಿಯೆಗಳು ಎಲ್ಲೇ ಆಗಲಿ  ಅವನ್ನು ಕಾಣುವ   ವಿವಿಧ ತಂತ್ರಗಳಿಗೆ ATT ಮತ್ತು CK ಒಂದು   ಪ್ರಾಪಂಚಿಕ ಭಂಡಾರವಾಗಿದೆ. MITRE ನ ATT ಮತ್ತು  CK ನ ಮೂಲಕ ನಾವು  ಸೈಬರ್-ದಾಳಿ ಪತ್ತೆ ಸಾಮರ್ಥ್ಯಗಳನ್ನು ರಚಿಸಲು ನಾವು 300 ಕ್ಕೂ ಹೆಚ್ಚು ಸೈಬರ್-ದಾಳಿ ಸೂಚಕಗಳನ್ನು ಪಡೆಯುತ್ತೇವೆ.

MITRE ನ ATT ಮತ್ತು CK ಚೌಕಟ್ಟಿನ ಪ್ರಾರಂಭಕ್ಕೆ ಮೊದಲು ನಾವು “ಏನು ಹುಡುಕಬೇಕು” ಎಂಬುದು ಸಂಸ್ಥೆಗಳಿಗೆ ಯಾವಾಗಲೂ ಸವಾಲಾಗಿತ್ತು. ಏಕೆಂದರೆ ಪತ್ತೆ ಮಾಡುವ  ಪ್ರೊಗ್ರಾಮನ್ನು ರೂಪಿಸಲು   ನಿರ್ದೇಶನ ನೀಡಲು ನಮ್ಮಲ್ಲಿ ಒಂದೇ ಸಮಗ್ರವಾದ  ಮೂಲ / ಚೌಕಟ್ಟು ಇರಲಿಲ್ಲ.

ಈ ವೆಬಿನಾರ್‌ನಲ್ಲಿ, ನಾವು ATT ಮತ್ತು CK  ಫ್ರೇಮ್‌ವರ್ಕ್‌ನ ಅವಲೋಕನವನ್ನು ನೋಡುತ್ತೇವೆ ಮತ್ತು ಈ ಫ್ರೇಮ್‌ವರ್ಕ್ ಅನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂಬುದರ ಕುರಿತು ಮುಂಚಲನಾ  ಮಾರ್ಗವನ್ನು ಚರ್ಚಿಸುತ್ತೇವೆ.

ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.

ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು  ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.