“ಮಧ್ಯಪ್ರವೇಶ ತಡೆಗಟ್ಟುವಿಕೆ ವ್ಯವಸ್ಥೆಗಳ ಪರಿಚಯ” ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 18

Date/s: 22 Jul 2020

Venue: Zoho

Organising Partners: ಸೈಸೆಕ್ (CySecK ) ಮತ್ತು ಮೆಕಫಿ


ವೆಬಿನಾರ್‌ಗಳ  ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK )  – “ಮಧ್ಯಪ್ರವೇಶ  ತಡೆಗಟ್ಟುವಿಕೆ ವ್ಯವಸ್ಥೆಗಳ ಪರಿಚಯ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಮೆಕಫಿಯ ಪಾಲುದಾರಿತ್ವದಲ್ಲಿ ನಡೆಸಲಾಗುತ್ತಿದೆ.

ಸಮಯ: ಸಂಜೆ 5:00 ರಿಂದ 6:30

ಸಂಕ್ಷಿಪ್ತ ಪರಿಚಯ:

“ಮಧ್ಯಪ್ರವೇಶ  ತಡೆಗಟ್ಟುವಿಕೆ ವ್ಯವಸ್ಥೆಗಳ  ಕುರಿತು ಮೂಲವಿಷಯಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ  ವಿಶದ ಪಡಿಸುವ ಗುರಿಯನ್ನು ಈ ವೆಬಿನಾರ್ ಹೊಂದಿದೆ. ಇದಲ್ಲದೆ,  ಐಡಿಎಸ್ / ಐಪಿಎಸ್ IDS/ IPS ಉದ್ದಿಮೆಗಳಿಗೆ ಒದಗುವ  ಅಪಾಯಗಳ ಸನ್ನಿವೇಶಗಳು  ಮತ್ತು  ಸವಾಲುಗಳ ಬಗ್ಗೆ ಕೂಡ ತಿಳಿಸಲಾಗುತ್ತದೆ.  ತಂತ್ರಜ್ಞಾನಗಳು ಮತ್ತು ವಿಧಾನಗಳ ಕುರಿತಂತೆ  ಡೇಟಾ ಎನ್ಕ್ರಿಪ್ಶನ್ ಬಗ್ಗೆ ಕೂಡ ತಿಳಿಸಲಾಗುತ್ತದೆ.

ಇದು ಯಾರಿಗೆ?

ನೆಟ್‌ವರ್ಕಿಂಗ್, ಪ್ರೋಟೋಕಾಲ್‌ಗಳು (tcp/ip, http, smtp), ಮೂಲ ಸೆಕ್ಯುರಿಟಿ ಪರಿಕಲ್ಪನೆಗಳು ಮತ್ತು ವೆಬ್ ದಾಳಿಗಳಂತಹ  (SQL ಇಂಜೆಕ್ಷನ್,   XSS ದಾಳಿ,  ಬಫರ್ ಓವರ್‌ಫ್ಲೋ ಇತ್ಯಾದಿ) ಪರಿಕಲ್ಪನೆಗಳ ಪರಿಚಯವಿರಬೇಕು.

ಗಮನಿಸಿ: ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು  ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.