“ಖಾಸಗಿತನ ಕಾನೂನು ಮತ್ತು ಅದರ ಪರಿಣಾಮಗಳು” ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 20
Date/s: 05 Aug 2020
Venue: Webex
Organising Partners: ಸೈಸೆಕ್ (CySecK )
ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK ) – “
ಖಾಸಗಿತನ ಕಾನೂನು ಮತ್ತು ಅದರ ಪರಿಣಾಮಗಳು” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು CySecK ನ ಅರಿವು ಮತ್ತು ಕೌಶಲ ನಿರ್ಮಾಣದ ವ್ಯವಸ್ಥಾಪಕರಾದ ಶ್ರೀಮತಿ ಶಿಖಾ ಪಾಠಕ್ ನಡೆಸಿಕೊಡಲಿದ್ದಾರೆ.
ದಿನಾಂಕ: 05 ಆಗಸ್ಟ್ 2020
ಸಮಯ: ಸಂಜೆ 5:00 ರಿಂದ 6:30
ಸಾರಾಂಶ:
ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಈಗ ಜಂಟಿ ಸಂಸದೀಯ ಸಮಿತಿಯು ಪರಿಶೀಲಿಸುತ್ತಿದೆ. ಮಸೂದೆಯ 2019 ಆವೃತ್ತಿಯು ದೇಶದಲ್ಲಿ ಈಗಿರುವ ಖಾಸಗಿತನ ಕಾನೂನುಗಳಿಗೆ ಪ್ರಮುಖ ಸುಧಾರಣೆಯನ್ನು ಪ್ರಸ್ತಾಪಿಸಿದೆ. ನಮ್ಮ ದೇಶದಲ್ಲಿ ಖಾಸಗಿತನ ಕಾನೂನುಗಳು ಬೆಳೆದುಬಂದ ಇತಿಹಾಸ , ಮಸೂದೆಯ ಪ್ರಮುಖ ಅಂಶಗಳು ಮತ್ತು ನಿಬಂಧನೆಗಳನ್ನು ಈ ವೆಬಿನಾರಿನಲ್ಲಿ ತಿಳಿಸಲಾಗುತ್ತದೆ. ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ಮತ್ತು ಪ್ರಕ್ರಿಯೆಗೊಳಿಸುವ ಉದ್ಯಮಗಳ ಮೇಲೆ ಈ ಮಸೂದೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ವೆಬಿನಾರ್ ವಿವರಿಸುತ್ತದೆ.
ದೇಶದ ಕಾನೂನಾಗಿ ಡೇಟಾ ಸಂರಕ್ಷಣಾ ಮಸೂದೆ 2019 ಜಾರಿಯಾದರೆ ವ್ಯಕ್ತಿಗಳು ಮತ್ತು ಉದ್ಯಮಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುವವರಿಗೆ ಈ ವೆಬಿನಾರ್ ಆರಂಭಿಕ ಮಾರ್ಗದರ್ಶಿಯಾಗಲಿದೆ.
ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.
ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.