"ಹಾರ್ಡ್‌ವೇರ್ ಮಟ್ಟದಲ್ಲಿ ಸೆಕ್ಯುರಿಟಿ/ಭದ್ರತೆ " ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 13

Date/s: 17 Jun 2020

Venue: Zoho

Organising Partners: ಸಂಘಟನಾ ಪಾಲುದಾರರು: ಕರ್ನಾಟಕ ಸರ್ಕಾರದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ದಿ ಸೈಬರ್ ಸೆಕ್ಯುರಿಟಿ(ಸಿಇಸಿಎಸ್)


ವಿದ್ಯಾರ್ಥಿಗಳು / ಅಧ್ಯಾಪಕರು / ಕೆಲಸ ಮಾಡುವ ವೃತ್ತಿಪರರಿಗೆ “ಹಾರ್ಡ್‌ವೇರ್ ಮಟ್ಟದಲ್ಲಿ ಸೆಕ್ಯುರಿಟಿ/ಭದ್ರತೆ” ಎಂಬ ವಿಷಯದ ಕುರಿತು ಸೈಸೆಕ್ (CySecK)   ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ  ಭಾಗವಾಗಿ ಒಂದು ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರ್ ಅನ್ನು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ  (IISc)  ಪ್ರೊ.ಕೆ .ರಾಜ್‌ಶೇಖರ್   ನಡೆಸಿಕೊಡಲಿದ್ದಾರೆ.

ವಿಷಯದ ಕುರಿತು ಸಂಕ್ಷಿಪ್ತ ಪರಿಚಯ: ಈ ವೆಬಿನಾರ್ನಲ್ಲಿ  ಹಾರ್ಡ್‌ವೇರ್ ಮಟ್ಟದಲ್ಲಿ ಸುರಕ್ಷತೆ/ಸೆಕ್ಯುರಿಟಿಯನ್ನು ಬಗ್ಗೆ ಚರ್ಚೆಯನ್ನು ನಡೆಸಲಾಗುತ್ತದೆ.  ಇಲ್ಲಿ ನಾವು ಅಪಾಯವನ್ನು ಅನುವು ಮಾಡಿಕೊಂಡ ಹಾರ್ಡ್‌ವೇರ್ನ ಅಪಾಯಗಳು   ಮತ್ತು ನಂಬಲರ್ಹ ಹಾರ್ಡ್‌ವೇರ್ ಮೂಲಕ ಸಾಧ್ಯವಾಗಿಸಿರುವ ಸೆಕ್ಯುರಿಟಿ/ ಸುರಕ್ಷತಾ ತಂತ್ರಗಳ ಬಗ್ಗೆ ಮಾತನಾಡುತ್ತೇವೆ. ಈ ಕ್ಷೇತ್ರದಲ್ಲಿ ವಿವಿಧ ಮಾರ್ಗಗಳ ಮೂಲಕ ನಡೆಸಲಾಗುತ್ತಿರುವ ಸಂಶೋಧನೆಯ ಹಿಂದಿರುವ ಉನ್ನತ ಮಟ್ಟದ ವಿಚಾರಕ್ರಮಗಳ ಬಗ್ಗೆ ತಿಳಿವಳಿಕೆಯನ್ನು ಕೂಡ ನಾವು ನಿಮಗೆ ನೀಡುತ್ತೇವೆ.

ಭಾಗವಹಿಸುವವರಿಗೆ ಬೇಕಾಗಿರುವ ಪೂರ್ವಭಾವಿ  ಅವಶ್ಯಕತೆಗಳು:

ಚಿಪ್ ವಿನ್ಯಾಸ, ಕಂಪ್ಯೂಟರ್ ಆರ್ಗನೈಸೇಷನ್  ಮತ್ತು ಆಪರೇಟಿಂಗ್ ಸಿಸ್ಟಂಗಳ ಬಗ್ಗೆ  ಮೂಲಾಂಶ ತಿಳುವಳಿಕೆ ಇಲ್ಲಿ ಭಾಗಿದಾರರಿಗೆ ಅಗತ್ಯ.

ದಿನಾಂಕ: 17 ಜೂನ್ 2020

ಸಮಯ: ಸಂಜೆ 5:00 ರಿಂದ 6:30

ಭಾಷಣಕಾರರು: ಪ್ರೊ. ಕೆ. ರಾಜ್‌ಶೇಖರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(IISc),  ಧಾರವಾಡ

ಗಮನಿಸಿ: ಸಭೆಯ ನಂತರ ಪ್ರಶ್ನೋತ್ತರ  ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.

ಮೌಲ್ಯಮಾಪನ ಪರೀಕ್ಷೆಯಲ್ಲಿ  ಪಾಸಾದವರಿಗೆ  ಪ್ರಮಾಣಪತ್ರವನ್ನು ನೀಡಲಾಗುವುದು.