ಮಾರ್ಗದರ್ಶಕರು

ಆನಂದ್ ಪೀಟರ್

ಎಡಿಪಿಆರ್  ನಿರ್ದೇಶಕರು, ಒನಿ 360 ಎಲ್ಎಲ್ ಪಿ ಪಾಲುದಾರರು ಮತ್ತು ನಿರ್ದೇಶಕರು

ಆನಂದ್ ಒಬ್ಬ ನುರಿತ ಕಮ್ಯುನಿಕೇಷನ್( ಸಂವಹನ)  ವೃತ್ತಿಪರರು. ಕಾರ್ಯತಂತ್ರ , ಸೃಜನಶೀಲತೆ ಮತ್ತು ನಿರ್ವಹಣೆ  ಸೇವೆಗಳನ್ನು ಸಮಗ್ರವಾಗಿ ಒದಗಿಸುವ ಮೂಲಕ   ಬಿಸಿನೆಸನ್ನು ಹೆಚ್ಚಿಸಿ ಅದರ ಮೌಲ್ಯ ಹೆಚ್ಚಿಸಲು ಅವರು ಕಕ್ಷಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಮುಖ್ಯವಾಹಿನಿ, ಹೊರಾಂಗಣ  ಮತ್ತು ಆನ್‌ಲೈನ್ ಜಾಹೀರಾತು ಮೂಲಕ ಬ್ರ್ಯಾಂಡಿಂಗ್ ,ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ-ಮಾಧ್ಯಮ ಮಾರ್ಕೆಟಿಂಗ್ ಮತ್ತು ಕಾರ್ಯಕ್ರಮಗಳಲ್ಲಿ ಅವರಿಗೆ  20ಕ್ಕೂ ಹೆಚ್ಚು  ವರ್ಷಗಳ  ಅನುಭವವಿದೆ.  ಇತ್ತೀಚೆಗೆ, ಅವರು ಕೃತಕ ಬುದ್ಧಿಮತ್ತೆ(ಎಐ), ಯಂತ್ರಕಲಿಕೆ(ಮೆಷಿನ್ ಲರ್ನಿಂಗ್) ಮತ್ತು ಆಳವಾದ ತಂತ್ರಜ್ಞಾನ(ಡೀಪ್ ) ಕುರಿತು  ಕಕ್ಷಿದಾರರ  ಪ್ರಾಯೋಗಿಕ ಯೋಜನೆಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಅಡೋಬ್, ಡೆಲ್, ಇನ್ಫೋಸಿಸ್, ಗೋದ್ರೇಜ್, ಮಿಂತ್ರಾ, ಫ್ಲಿಪ್ಕಾರ್ಟ್, ಕೊಚಿ ಬಿನಾಲೆ ಕಾನ್ಟೆಂಪೊರರಿ ಆರ್ಟ್ ಫೆಸ್ಟಿವಲ್, ಲೈಫ್ ಸ್ಟೈಲ್, ನಾರಾಯಣ ಹೆಲ್ತ್, ವಿಪ್ರೊ ಲಿಮಿಟೆಡ್, ಐಟಿಸಿ ಫುಡ್ಸ್, ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯ, ಎಕ್ಸ್ ಟೆಪ್  ಸ್ಪೋರ್ಟ್ಸ್ ಫ್ಯಾಶನ್, ಮೊಬಿಕಾಮ್, ಬ್ರಿಟಾನಿಯಾ ಇಂಡಸ್ಟ್ರೀಸ್  ಮತ್ತು ಟಾಟಾ ಇಂಡಿಕಾಮ್ ಇತ್ಯಾದಿ ಬಹಳ ಉದ್ದಿಮೆಗಳ  ಗ್ರಾಹಕರನ್ನು ಆನಂದ್ ಹೊಂದಿದ್ದಾರೆ.   ಭಾರತದ ಬೆಂಗಳೂರಿನ ಎಫ್‌ಟಿಡಬ್ಲ್ಯೂ ಡಿಸೈನ್ ಸ್ಟುಡಿಯೋ, ಗ್ರೇ ಡಿಜಿಟಲ್, ಮೆಕ್‌ಕ್ಯಾನ್ ಎರಿಕ್ಸನ್, ಪೋರ್ಟ್ಲ್ಯಾಂಡ್ ಇಂಡಿಯಾ ಔಟ್ ಡೋರ್ ಅಡ್ವರ್ಟೈಸಿಂಗ್ ಉದ್ದಿಮೆಗಳ ಬಿಸಿನೆಸ್ ಹಾಗೂ ಬಿಸಿನೆಸ್  ಅಭಿವೃದ್ಧಿಯ ಮುಖ್ಯಸ್ಥರಾಗಿದ್ದಾರೆ . ಜಾಗತಿಕ ಗ್ರಾಹಕರಿಗೆ , ವಿಶೇಷವಾಗಿ ಉತ್ತರ ಅಮೆರಿಕಾ ಮತ್ತು ಇಎಂಇಎಗಳಲ್ಲಿರುವವರಿಗೆ  ಸಿ-ಸೂಟ್ ಸಾಧ್ಯತೆಯನ್ನು ಕೇಂದ್ರೀಕರಿಸಿ ಮಾರುಕಟ್ಟೆ ಬೆಂಬಲ ಸಾಮಗ್ರಿಗಳನ್ನು ತಯಾರಿಸುವ ಜವಾಬ್ದಾರಿಯುತ ಪಾತ್ರವೂ ಅವರು ನಿರ್ವಹಿಸುತ್ತಿದ್ದಾರೆ.

ಅರುಣ್ ರಾಘವನ್

ಅರಲಿ ವೆಂಚರ್ಸ್ ಸಹ-ಸಂಸ್ಥಾಪಕ ಮತ್ತು ಪಾಲುದಾರ

ಅರುಣ್ ರವರು  ವಿಚ್ಛೇದಕಾರಿ  ಡೀಪ್ ಟೆಕ್ನಲ್ಲಿ  ಹೂಡಿಕೆ ಮಾಡುವ ಮತ್ತು ಟೆಕ್ ಸ್ಟಾರ್ಟ್ಅಪ್‌ಗಳ ಉದ್ದಿಮೆದಾರಿಕೆಗೆ ನೆರವು ನೀಡುವ  ಆರಂಭಿಕ ಹಂತದ ವಿಸಿ ಫಂಡ್ ಆಗಿರುವ    ಅರಲಿ  ವೆಂಚರ್ಸ್‌ನ ಸಹ-ಸ್ಥಾಪಕ ಮತ್ತು ಪಾಲುದಾರರಾಗಿದ್ದಾರೆ.    ಅವರು ಡೀಪ್-ಟೆಕ್ ಉದ್ದಿಮೆ  ಮಂಡಲಿಗಳಲ್ಲಿ ಸ್ಟಾರ್ಟ್ಅಪ್ಗಳ  ಮೇಲೆ ಕೇಂದ್ರೀಕರಿಸಿ ಅವರಿಗೆ ಉತ್ಪನ್ನ, ಮಾರುಕಟ್ಟೆ ಮತ್ತು ಕಾರ್ಯತಂತ್ರಗಳ ಬಗ್ಗೆ ಸಲಹೆ ನೀಡುತ್ತಾರೆ.

ಅರಲಿ ಸಂಸ್ಥೆಗೆ ಮುಂಚೆ  ಅರುಣ್ ರವರು  ಸ್ಟಾರ್ಟ್ಅಪ್ಗಳ ಉದ್ಯಮಕ್ಕೆ ಬಂಡವಾಳ ಕ್ರೋಡೀಕರಣಕ್ಕೆ ಮತ್ತು ಸಂಸ್ಥೆಯನ್ನು ಮೇಲ್ಹಂತಕ್ಕೆ ಕರೆದೊಯ್ಯಲು  ನೆರವು ನೀಡುವ ಒಂದು ಬಾಟಿಕ್ ಸಲಹಾ ಸಂಸ್ಥೆಯಾದ ಸೀಡ್‌ಎಕ್ಸ್ ಸಂಸ್ಥೆಯ ಸಹಸಂಸ್ಥಾಪಕರಾಗಿ ಅದನ್ನು ನಡೆಸಿದರು, ತಂತ್ರಜ್ಞಾನ, ಬಿಸಿನೆಸ್  ಸಲಹೆ,  ನಿರಂತರತೆ  ಮತ್ತು ಗ್ರಾಹಕ ಅಂತರ್ಜಾಲ ವಲಯವನ್ನು ಅರುಣ್ ರವರ ಕಾರ್ಪೊರೇಟ್ ವೃತ್ತಿಜೀವನವು ವ್ಯಾಪಿಸಿದೆ.  ಸೋನಾಟಾ ಸಾಫ್ಟ್ವೇರ್, ಡೆಲಾಯ್ಟ್, ಇನ್ಫೋಸಿಸ್ ಬಿಪಿಓ ಮತ್ತು ಐಬಿಎಂನಲ್ಲಿ ಇವರು ಪಾತ್ರ ನಿರ್ವಹಿಸಿದ್ದಾರೆ.  ತಮ್ಮ ಕಾರ್ಪೊರೇಟ್ ಕಾರ್ಯಗಳ ಕಾಲಾವಧಿಯಲ್ಲಿ  ಅವರು ಎಂ ಮತ್ತು ಎ  ಮಾಡಿದ್ದಾರೆ, ಸ್ವಾಧೀನಪಡಿಸಿಕೊಂಡ ಸಂಸ್ಥೆಗಳ  ಅಭಿವೃದ್ಧಿಯನ್ನು ನಿರ್ವಹಿಸಿದ್ದಾರೆ. ಫೇರ್‌ಟ್ರೇಡ್ ಇಂಡಿಯಾ ಮತ್ತು ಅಪ್‌ಸೈಕ್ಲಿಂಗ್ ಬ್ರಾಂಡ್‌ ದಂತಹ  ರಿಮ್ಯಾಜಿನ್ಡ್  ಇತ್ಯಾದಿ ನಿರಂತರತೆಯ ಮುಂದೊಡಗುಗಳಲ್ಲಿ  ಸಲಹೆಗಾರರಾಗಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆಶಿಶ್ ಕುಂಡು

ಸಂಸ್ಥಾಪಕರು, ಸೈಫನ್ಸ್

ಡಾ. ಆಶಿಶ್ ಕುಂಡು ಒಬ್ಬ ಪ್ರಖ್ಯಾತ ವಿಜ್ಞಾನಿಯಾಗಿದ್ದು ಸೆಕ್ಯುರಿಟಿ, ಖಾಸಗಿತನ , ಹೊಂದಾವಣೆ ಮತ್ತು AI ಎತಿಕ್ಸ್ ಕ್ಷೇತ್ರದ ನಾಯಕರು  ಮತ್ತು ಪ್ರಖ್ಯಾತ ಭಾಷಣಕಾರರು. ಸ್ವಯಂ-ಚಾಲಿತ ಕಾರುಗಳು, ಟೆಲಿ-ಆಪರೇಟೆಡ್ ಡ್ರೈವಿಂಗ್ ಸುರಕ್ಷತೆ ಮತ್ತು ಹೊಂದಾವಣೆ  ಹಾಗೂ ಯುಎವಿಗಳ ಎಲ್ಲಾ ಕಾರ್ಯಗಳನ್ನು ಮುನ್ನಡೆಸಿದ್ದಾರೆ. ಕ್ಲೌಡ್-ಆಧಾರಿತ ಆರೋಗ್ಯ ರಕ್ಷಣೆ ಮತ್ತು ಕ್ಲೌಡ್- ಆಧಾರಿತ AI ಚಾಲಿತ ಶಿಕ್ಷಣ ವೇದಿಕೆಗಳ ಸುರಕ್ಷತೆ ಮತ್ತು ಹೊಂದಾವಣೆಯನ್ನೂ  ಮುನ್ನಡೆಸಿದ್ದಾರೆ. ಅವರು ನ್ಯೂರೋ ಸೈಬರ್‌ ಸೆಕ್ಯುರಿಟಿಯನ್ನು ಅದರ ಸೈಬರ್‌ ಸೆಕ್ಯುರಿಟಿಯ ಮುಖ್ಯಸ್ಥರಾಗಿ ಮುನ್ನಡೆಸಿದ್ದಾರೆ. ಡಾ. ಕುಂಡು  IBM T J ವ್ಯಾಟ್ಸನ್ ಸಂಶೋಧನಾ ಕೇಂದ್ರದಲ್ಲಿ ಮಾಸ್ಟರ್ ಇನ್ವೆಂಟರ್ ಮತ್ತು ರಿಸರ್ಚ್ ಸ್ಟಾಫ್ ಸದಸ್ಯರಾಗಿಯೂ ಕೆಲಸ ಮಾಡಿದರು. ಅವರ ಸಂಶೋಧನಾ ಕಾರ್ಯವು  150 ಕ್ಕೂ ಹೆಚ್ಚು ಪೇಟೆಂಟ್‌ಗಳ ಮುಂದಾಳತ್ವ ವಹಿಸಿದ್ದು ಇಲ್ಲಿಯವರೆಗೆ ಅವರು 110 ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದಿದ್ದಾರೆ.   40 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ.   ಪರ್ಡ್ಯೂ ವಿಶ್ವವಿದ್ಯಾಲಯದಿಂದ ಸೈಬರ್‌ ಸೆಕ್ಯುರಿಟಿಯಲ್ಲಿ. ಡಾ.ಕುಂಡು ತಮ್ಮ ಪಿಎಚ್‌ಡಿ ಪದವಿ ಪಡೆದರು. ಅವರಿಗೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ.

ಡಾ. ಕುಂಡು ಅವರನ್ನು ಹಲವು ಬಾರಿ ನ್ಯೂಯಾರ್ಕ್‌ನ IBM Research ಪ್ರತಿಷ್ಠಿತ ಮಾಸ್ಟರ್ ಇನ್ವೆಂಟರ್ ಮಾನ್ಯತೆ ನೀಡಿ ಗೌರವಿಸಲಾಗಿದೆ. ಅವರು ACM ಪ್ರತಿಷ್ಟಿತ  ಸದಸ್ಯರಾಗಿ ಗೌರವವನ್ನು  ಪಡೆದಿದ್ದಾರೆ ಮತ್ತು ಈ ಹಿಂದೆ ಅವರನ್ನು ACM ಪ್ರತಿಷ್ಟಿತ  ಭಾಷಣಕಾರ ಎಂದು ಹೆಸರಿಸಲಾಗಿತ್ತು. ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡಾ. ಕುಂಡುರವರ  ಸೈಬರ್‌ ಸೆಕ್ಯುರಿಟಿ  ಡಾಕ್ಟರೇಟ್ ಸಂಶೋಧನೆಯಲ್ಲಿ   ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರತಿಷ್ಠಿತ CERIAS ಡೈಮಂಡ್ ಪ್ರಶಸ್ತಿಯನ್ನು ದೊರಕಿದೆ.

ಜೆ.ಕೆ.

ಪ್ರಧಾನ ಪೇಟೆಂಟ್ ಎಂಜಿನಿಯರ್, ಗ್ರಾಬ್

ಜೆಕೆರವರು  ಗ್ರಾಬ್‌ನಲ್ಲಿ ಪ್ರಧಾನ ಪೇಟೆಂಟ್ ಎಂಜಿನಿಯರಾಗಿದ್ದಾರೆ. ಅವರು ಇತ್ತೀಚೆಗೆ ಮೈಕ್ರೋಸಾಫ್ಟಿನಿಂದ ಪೇಟೆಂಟ್ ಪ್ರೋಗ್ರಾಂಗೆ ಚಾಲನೆ ನೀಡಲು ಗ್ರಾಬ್ ಸೇರಿದರು. ಮುಂಚೆ ಮೈಕ್ರೋಸಾಫ್ಟ್ ಅಜುರೆ, ಬಿಂಗ್ ಮತ್ತು ವಿಂಡೋಸ್ ಗಳ ವಿವಿಧ ತಂಡಗಳಲ್ಲಿ ವಿನ್ಯಾಸ  ಅಭಿವೃದ್ಧಿಯ ಮುಂದಾಳತ್ವ ವಹಿಸಿದ್ದ ಜೆಕೆರವರು ಮೈಕ್ರೋಸಾಫ್ಟಿನಲ್ಲಿ ,ಸುಮಾರು 6000 ಪೇಟೆಂಟುಗಳ ಭದ್ರತಾ ಪೇಟೆಂಟ್ ಕಾರ್ಯ ನಿರ್ವಹಿಸಿದರು.  ಅವರು ಏಳು ಪೇಟೆಂಟ್‌ಗಳಲ್ಲಿ ಸಂಶೋಧಕರಾಗಿದ್ದಾರೆ ಮತ್ತು ಮಲ್ಟಿಪಲ್  ಇಂಟರ್ನೆಟ್ ಸ್ಟಾಂಡರ್ಡ್ ಆರ್‌ಎಫ್‌ಸಿಗಳ ಲೇಖಕರಾಗಿದ್ದಾರೆ.

ನಂದಕುಮಾರ್ ಸರವಾಡೆ

ಸಿಇಒ, ರಿಸರ್ವ್ ಬ್ಯಾಂಕ್ ಇನ್ಫರ್ಮೇಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ (ReBIT).

ಶ್ರೀ ನಂದಕುಮಾರ್ ಸರವಾಡೆ ಈಗ ರಿಸರ್ವ್ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಪ್ರೈ ಲಿ (ReBIT)ನ  ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಿಇಒ, ಸಿಟಿಬ್ಯಾಂಕ್ ಇಂಡಿಯಾದ ನಿರ್ದೇಶಕರಾಗಿ   ಭದ್ರತೆ, ತನಿಖೆ ಮತ್ತು ನಿಗಾ ದಲ್ಲಿ ಮುಖ್ಯಸ್ಥರಾಗಿದ್ದರು, ಇದಲ್ಲದೆ ಫೈನಾನ್ಸಿಯಲ್ ಕ್ರೈಮ್ ಪ್ರಿವೆನ್ಷನ್ ಗ್ರೂಪ್, ಐಸಿಐಸಿಐ ಬ್ಯಾಂಕ್ ಜನರಲ್ ಮ್ಯಾನೇಜರ್ ಮತ್ತು ಸ್ವತಂತ್ರ ಸೆಕ್ಯುರಿಟಿ   ವೃತ್ತಿ ಮತ್ತು ಸೈಬರ್ ಅಪರಾಧ ತಜ್ಞರು,   ಅರ್ನ್ ಸ್ಟ್ ಅಂಡ್ ಯಂಗ್ ಮತ್ತು ಐಸಿಐಸಿಐ ಬ್ಯಾಂಕಿನ  ಸಲಹೆಗಾರರಾಗಿದ್ದರು.

ಶ್ರೀ ಸರವಾಡೆಯವರು ಸ್ವಯಂ ನಿವೃತ್ತಿಗೆ ಮುಂಚೆ 21 ವರ್ಷಗಳ ಕಾಲ ಭಾರತ ಪೊಲೀಸ್ ಸೇವೆಯಲ್ಲಿ  (ಐಪಿಎಸ್) ಸೇವೆ ಸಲ್ಲಿಸಿದರು.  ಅಲ್ಲಿ  ಅವರು ತಮ್ಮ ಕೊನೆಯ ಹುದ್ದೆ NASSCOMನ ಸೈಬರ್ ಸೆಕ್ಯುರಟಿ ಮತ್ತು ಹೊಂದಾವಣೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.   ಇದು ಸೈಬರ್ ಸೆಕ್ಯುರಿಟಿ , ಖಾಸಗಿತನ, ಕಾನೂನು ಜಾರಿಗಾಗಿ ಸಾಮರ್ಥ್ಯ ವರ್ಧನೆ,   NASSCOMನ ಸದಸ್ಯರಿಗೆ ಘಟನೆ ಪ್ರತಿಕ್ರಿಯೆ ನಿರ್ವಹಣೆಗೆ ಸಲಹೆ ಮತ್ತು ಸೈಬರ್ ಸೆಕ್ಯುರಿಟಿ ಬಗ್ಗೆ ಸಮುದಾಯ ಅರಿವು  ಪ್ರಚಾರಗಳನ್ನು ಆಯೋಜನೆ ಮಾಡುವುದು ಒಳಗೊಂಡಿತ್ತು.  ಅವರು ಸಿಬಿಐನಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1987 ರ ಬ್ಯಾಚ್‌ನ ಐಪಿಎಸ್‌ನ ಅತ್ಯುತ್ತಮ ಆಲ್‌ರೌಂಡ್ ಪ್ರೊಬೇಷನರಾಗಿರುವುದರಿಂದ  ಶ್ರೀ ಸರವಾಡೆ ಅವರಿಗೆ ಪ್ರಧಾನ ಮಂತ್ರಿ ಬ್ಯಾಟನ್ ಮತ್ತು ರಿವಾಲ್ವರ್ ನೀಡಲಾಯಿತು  ಮತ್ತು ವಿಶೇಷ ಸೇವೆಗಳಿಗಾಗಿ ಭಾರತೀಯ ಪೊಲೀಸ್ ಪದಕ ಕೂಡ ಸಿಕ್ಕಿತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸ್ಥಾಪಿಸಿದ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಕಂಟ್ರೋಲ್ ಗವರ್ನನ್ಸ್ ಅಂಡ್ ಟೆಕ್ನಾಲಜಿ ರಿಸ್ಕ್ ಮ್ಯಾನೇಜ್ಮೆಂಟ್ ಸ್ಟಾಂಡರ್ಡ್ಸ್, ಮಹಾರಾಷ್ಟ್ರ ಸರ್ಕಾರದ ಸೈಬರ್ ಸೆಕ್ಯುರಿಟಿ ಯೋಜನೆ , ತಂತ್ರಜ್ಞಾನ ಮಾಹಿತಿ, ಭಾರತ ಸರ್ಕಾರದ ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿ (ಟಿಫಾಕ್)ಗಳಲ್ಲಿ ಉನ್ನತ ಮಟ್ಟದ ಗುಂಪಿನಲ್ಲಿ ಅವರು ಕಾರ್ಯ ನಿರ್ವಹಿಸಿದರು.    ಅವರು ಉನ್ನತ ತರಬೇತಿ ಸಂಸ್ಥೆಗಳು, ತಾಂತ್ರಿಕ ಸಮಾವೇಶಗಳು ಮತ್ತು ಉದ್ದಿಮೆ ವೇದಿಕೆಗಳಲ್ಲಿ ನಿಯತ ಭಾಷಣಕಾರರು.   

ಅವರು ಔರಂಗಾಬಾದ್‌ನ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನ ಪದವಿ ಮತ್ತು ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಪ್ರದೀಪ್ ಬಾಣವಾರ

ಎಪಿಕ್.ಒನ್ ಸಂಸ್ಥೆಯ ಎಂಜಿನಿಯರಿಂಗ್ ಮುಖ್ಯಸ್ಥ,ರು

ಪ್ರದೀಪ್ ಒಬ್ಬ ಜನರಲಿಸ್ಟ್  ಸಾಫ್ಟ್‌ವೇರ್ ಎಂಜಿನಿಯರಾಗಿದ್ದಾರೆ. ಅವರು ಆರಂಭಿಕ ಹಂತದ ಸ್ಟಾರ್ಟ್ ಅಪ್ ಆಗಿರುವ  ಎಪಿಕ್.ಒನ್ ನಲ್ಲಿ ಎಂಜಿನಿಯರಿಂಗ್ ಮುಖ್ಯಸ್ಥರಾಗಿದ್ದಾರೆ. ಈ  ಹಿಂದೆ  ಅವರು ಅನೇಕ ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ವಿಫಲರಾಗಿದ್ದರು ಮತ್ತು ಮೈಕ್ರೋಸಾಫ್ಟ್ ಆಕ್ಸಿಲರೇಟರ್‌ನಲ್ಲಿ ಮಾಜಿ ಸಿಟಿಒ ಆಗಿದ್ದರು. ಬ್ಯಾಕೆಂಡ್, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಆಳವಾದ ಕಲಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆರಂಭಿಕ ಹಂತದ ಸ್ಟಾರ್ಟ್ ಅಪ್ ಉತ್ಪನ್ನ ಮತ್ತು ತಂತ್ರಜ್ಞಾನ, ಮಾರುಕಟ್ಟೆ ಯೋಗ್ಯ  ಉತ್ಪನ್ನ ಮತ್ತು ಬಳಕೆದಾರ ಸುಗಮ ವಿನ್ಯಾಸ ರಚನೆ ಕ್ಷೇತ್ರಗಳಲ್ಲಿ ಅವರು  ನಿರ್ದಿಷ್ಟ ಪರಿಣತಿ ಹೊಂದಿದ್ದಾರೆ.  

ಪ್ರಕಾಶ್ ಭಾಸ್ಕರನ್

ಸೆಕ್ಯುರಿಲಿಶೇರ್‌ನ ಸಂಸ್ಥಾಪಕರು ಮತ್ತು ಸಿಇಒ

ಪ್ರಕಾಶ್ ಭಾಸ್ಕರನ್ ಸರಣಿ  ಉದ್ಯಮಿ.  ಅವರು ಐಟಿ ಕ್ಷೇತ್ರದ  ವಿವಿಧ ಮ್ಯಾನೇಜುಮೆಂಟು ಮತ್ತು ತಾಂತ್ರಿಕ ಪಾತ್ರಗಳಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ. ಇ-ಕಾಮರ್ಸ್, ಬಿ 2 ಬಿ ಮಾರುಕಟ್ಟೆ ಸ್ಥಳಗಳು, ವೆಬ್ ಅಪ್ಲಿಕೇಶನ್‌ಗಳು, ಎನ್‌ಕ್ರಿಪ್ಷನ್, ಡೇಟಾ ಸೋರಿಕೆ ತಡೆ  ಮತ್ತು ಫೈಲ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ವಿವಿಧ ಬಳಕೆಯ ಸಮಸ್ಯೆಗಳನ್ನು ಪರಿಹರಿಸಲು   ಅವರ ಇತ್ತೀಚಿನ ಸ್ಟಾರ್ಟ್ ಅಪ್   ಸೆಕ್ಯೂರ್ಲಿಶೇರ್ (SecurelyShare ) ಮುಂದಿನ ಪೀಳಿಗೆಯ ಡೇಟಾ ಸೆಕ್ಯುರಿಟಿ ಮತ್ತು ಆಡಳಿತ ವೇದಿಕೆಯನ್ನು ರೂಪಿಸುತ್ತಿದೆ..

ಅವರ ಹಿಂದಿನ ಸ್ಟಾರ್ಟ್ ಅಪ್   ಪವಾ ಫೈಲ್ ಮತ್ತು ಡಾಕ್ಯುಮೆಂಟ್ ಸುರಕ್ಷತೆಯದಾಗಿತ್ತು.   ​​2015 ರಲ್ಲಿ ಪವಾ ಅನ್ನು Cisco ಸಂಸ್ಥೆಯು ಸ್ವಾಧೀನಪಡಿಸಿಕೊಂಡಿತು. ಅವರು 2016 ರಲ್ಲಿ Cisco ವನ್ನು ತೊರೆದರು ಮತ್ತು ಪವಾದ  ಸ್ವತ್ತುಗಳ ಮೂಲಕ  ತಮ್ಮ ಹೊಸ ಉದ್ಯಮ  ಸೆಕ್ಯುರಿಲಿಶೇರ್ ಅನ್ನು ಆರಂಭಿಸಿದರು.

ಪವಾಕ್ಕೆ ಮುಂಚಿತವಾಗಿ, ಪ್ರಕಾಶ್ ರವರು  VoIP ಸೇವೆಗಳು, HR / CRM ಪರಿಹಾರಗಳು ಮತ್ತು B2B ಮಾರುಕಟ್ಟೆ ಕ್ಷೇತ್ರಗಳಲ್ಲಿ ಇತರೆ ಐದು ಆರಂಭಿಕ ಸಂಸ್ಥೆಗಳ ಸಂಸ್ಥಾಪಕರಾಗಿದ್ದರು. AT&T, ಲ್ಯೂಸೆಂಟ್ ಮತ್ತು ಐಬಿಎಂ IBMಗಳಂತಹ  ಪ್ರಮುಖ ಉದ್ದಿಮೆ ಸಂಸ್ಥೆಗಳಲ್ಲಿ ಅವರು ಹಲವಾರು ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದಾರೆ. ಪ್ರಕಾಶ್ರವರು ಒಹೆಚ್,  ಆಕ್ರಾನ್ನಿನ ಆಕ್ರಾನ್ ವಿಶ್ವವಿದ್ಯಾಲಯದಿಂದ ಎಂ.ಎಸ್. ಪದವಿ ಮತ್ತು IBM ಡಲ್ಲಾಸಿನ ಸದರ್ನ್ ಮೆತಾಡಿಸ್ಟ್ ವಿಶ್ವವಿದ್ಯಾಲಯದಿಂದ ಎಂ.ಬಿ.ಎ. ಪದವಿ ಪಡೆದಿದ್ದಾರೆ. ಅವರು ಯುಎಸ್‌ಪಿಟಿಒಯ  7 ಪೇಟೆಂಟ್‌ಗಳನ್ನು  ಹೊಂದಿದ್ದಾರೆ.

ರಾಜೇಶ್ ಮೋನಿ

ಸಿಇಒ, ಸ್ಪೆಲ್‌ಸೆಕ್ಯೂರಿಟಿ

ರಾಜೇಶ್ ರವರು ಚೆನೈ ಮತ್ತು ಬೆಂಗಳೂರು ಮೂಲದ ಸ್ಪೆಲ್‌ಸೆಕ್ಯೂರಿಟಿ ಲಿಮಿಟೆಡ್‌ನ ಸಂಸ್ಥಾಪಕರು. ಅತ್ಯಾಧುನಿಕ  ಸೈಬರ್ ಅಪಾಯಗಳಿಂದ ದೊಡ್ಡ ಸಂಸ್ಥೆಗಳು ಮತ್ತು ಸರ್ಕಾರಗಳನ್ನು   ರಕ್ಷಣೆ ಮಾಡುವಲ್ಲಿ ಸ್ಪೆಲ್‌ಸೆಕ್ಯೂರಿಟಿ ಪರಿಣತಿ ಹೊಂದಿದೆ.

ಸ್ಪೆಲ್‌ಸೆಕ್ಯೂರಿಟಿಗೆ ಮುಂಚಿತವಾಗಿ, ರಾಜೇಶ್ ರವರು   ಸಿಲಿಕಾನ್ ವ್ಯಾಲಿ ಸ್ಟಾರ್ಟ್ಅಪ್‌ಗಳಾದ ಫೈರ್‌ಐ, ಜುನಿಪರ್, ವೆಬ್‌ರೂಟ್ ಮತ್ತು ಕ್ವಾಲಿಸ್‌ಗಳಲ್ಲಿ ಹಲವಾರು  ಎಂಜಿನಿಯರಿಂಗ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಜೇಶ್ ರವರು  ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ಅವರನ್ನು  ಬೆಳೆಸಲು ಬಹಳ ಆಸಕ್ತರು. ಅವರು ಭಾರತದ  ಸೈಬರ್ ಸೆಕ್ಯುರಿಟಿ ವಲಯದಲ್ಲಿ ಬಹಳ ಕ್ರಿಯಾಶೀಲರಾಗಿದ್ದಾರೆ.

ರವಿ ಐತಾಳ್

ಸ್ಥಾಪಕ, ನೆಟ್ ಸ್ಕೋಪ್ ಮುಖ್ಯ ಆರ್ಕಿಟೆಕ್ಟ್

ರವಿಯವರು  ನೆಟ್‌ಸ್ಕೋಪ್‌ನ ಸ್ಥಾಪಕರು ಮತ್ತು ಪ್ರಮುಖ ಆರ್ಕಿಟೆಕ್ಟರಾಗಿ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ತಂತ್ರಜ್ಞಾನ ಸೃಜನಶೀಲತೆ, ನಾಯಕತ್ವ ಮತ್ತು ಗ್ರಾಹಕರ ಸಮಸ್ಯೆಗಳನ್ನು ಪರಿಹಾರದಲ್ಲಿ ತೊಡಗಿದ್ದಾರೆ.  ಈ ಹಿಂದೆ, ರವಿಯವರು ಪಾಲೊ ಆಲ್ಟೊ ನೆಟ್‌ವಕ್ಸ್ ನಲ್ಲಿ  ವಿಶ್ವದ ಮೊದಲ ಅಪ್ಲಿಕೇಶನ್ ಮತ್ತು ಬಳಕೆದಾರ-ಅರಿವುಳ್ಳ ಮುಂದಿನ  ಪೀಳಿಗೆಯ ಫೈರ್‌ವಾಲ್ ನ ವಿನ್ಯಾಸ ಮತ್ತು ರಚನೆಯಲ್ಲಿ  ಪ್ರಮುಖ ಪಾತ್ರ ವಹಿಸಿದ್ದರು. ರವಿಯವರು ಉದ್ಯಮದ ಚಿಂತನೆ  ನಾಯಕರು. 11 ಪೇಟೆಂಟ್‌ಗಳ ಲೇಖಕರು ಮತ್ತು ಡಮ್ಮೀಸ್ ಬುಕ್ಕುಗಳ  ಮೊದಲ ಉದ್ಯಮದ ಕ್ಲೌಡ್ ಸೆಕ್ಯುರಿಟಿಯ  ಸಹ ಲೇಖಕರು. ರವಿಯವರು  ಜುನಿಪರ್ ನೆಟ್‌ವರ್ಕ್ಸ್ ಮತ್ತು ಸಿಸ್ಕೋ ಸಿಸ್ಟಂಸ್‌ಗಳಲ್ಲಿ ಹಲವಾರು ತಾಂತ್ರಿಕ ನಾಯಕತ್ವ ಮತ್ತು ನಿರ್ವಹಣಾ ಹುದ್ದೆಗಳಲ್ಲಿ ಕೆಲಸಮಾಡಿದ್ದರು.

ಸಂದೀಪ್ ಕಪೂರ್

ಆಲ್ಗೊ ಲೀಗಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರು

ಸಂದೀಪ್ ಕಪೂರ್ ಆಲ್ಗೊ ಲೀಗಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರಾಗಿದ್ದು, ಹೂಡಿಕೆ ಕಾನೂನುಗಳು, M ಅಂಡ್ A, ಬಂಡವಾಳ ಮಾರುಕಟ್ಟೆ ಮತ್ತು ತಂತ್ರಜ್ಞಾನ ಕಾನೂನಿನಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ. ಸಂದೀಪ್ ಬೆಂಗಳೂರು, ಮುಂಬೈ ಮತ್ತು ದೆಹಲಿಯ ಕಚೇರಿಗಳನ್ನು ಹೊಂದಿದ್ದು  50 ಕ್ಕೂ ಹೆಚ್ಚು ವಕೀಲರ ತಂಡವನ್ನು ಹೊಂದಿದ್ದಾರೆ. ಅವರು ಸೃಜನಶೀಲರು ಮತ್ತು ಹೂಡಿಕೆದಾರರಿಗೆ    ಖಾಸಗಿ ಷೇರುಗಳು, ವೆಂಚರ್ ಬಂಡವಾಳ, ತಂತ್ರಜ್ಞಾನ ಮತ್ತು ಇತರ ಇಂಟರ್ನೆಟ್ ಸಂಬಂಧಿ  ವ್ಯಾಪಾರ ಕ್ಷೇತ್ರಗಳಲ್ಲಿ  ಸಲಹೆ ನೀಡುವಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿದ್ದಾರೆ.

ಕಾನೂನು ವೃತ್ತಿಯ ಸಾಮರ್ಥ್ಯ ಹೆಚ್ಚಿಸುವ  ತಂತ್ರಜ್ಞಾನದ ಅಳವಡಿಕೆ ಮೂಲಕ ಸಂಕೀರ್ಣ ಕಾನೂನು ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಕಂಡುಕೊಳ್ಳುವ ಅವರ ಆಳವಾದ ಉತ್ಸಾಹವೇ  ಸಂದೀಪ್ರ ಅಲ್ಗೋ ಲೀಗಲ್ ಹುಟ್ಟಿಗೆ ಕಾರಣವಾಯಿತು. .     ಹೂಡಿಕೆ ಪ್ರಕ್ರಿಯೆಯ ಆನ್-ಬೋರ್ಡಿಂಗ್, ಒಪ್ಪಂದಗಳು, ಪೂರ್ಣಗೊಳಿಸುವಿಕೆ ಮತ್ತು ಅಂಗೀಕಾರ ಕಾರ್ಯಗಳು ಬೇಗ ಆಗುವಂತೆ ಮಾಡಿ ಸಂಕೀರ್ಣತೆಯನ್ನು ಕಡಿಮೆಗೊಳಿಸಿದ ಹಲವಾರು ಸಾಧನಗಳ ರಚನೆಯಲ್ಲಿ ಅವರು ಭಾಗಿಯಾಗಿದ್ದಾರೆ .  ತಂತ್ರಜ್ಞಾನವನ್ನು ಬಳಸಿದ ಪ್ರಾರಂಭಿಕರಾಗಿ  , ಅವರು ಭಾರತದ ಕಾನೂನು ವೃತ್ತಿಯ ಇನ್ ಹೌಸ್ ಪರಿವರ್ತನೆಯಲ್ಲಿ  ಮಹತ್ವದ ಕೊಡುಗೆ ನೀಡಿದ್ದಾರೆ. ಕಕ್ಷಿದಾರ-ಕೇಂದ್ರಿತ ಅನುಭವ ಮತ್ತು ವಿಶೇಷ ಮೌಲ್ಯವರ್ಧನೆಗಾಗಿ   ತಂತ್ರಜ್ಞಾನವನ್ನು ಉನ್ನತೀಕರಣ  ಮತ್ತು ಸೃಜನಶೀಲತೆಯನ್ನು ಅವರು   ತಮ್ಮ ಆಲ್ಗೊ ಲೀಗಲ್ಲಿನಲ್ಲಿ ಮಾಡಲು ಹೊರಟಿದ್ದಾರೆ.

ಅಲ್ಗೊ ಲೀಗಲ್‌ಗೆ ಮುಂಚೆ ಸಂದೀಪ್ 9 ವರ್ಷಗಳ ಕಾಲ ಸಿಕ್ವೊಯ ಕ್ಯಾಪಿಟಲ್‌ನಲ್ಲಿ ಕಳೆದರು. ಅವರು   ಸಿಕ್ವೊಯಾದ ವಿಶ್ವ ಮಟ್ಟದ ಮೊದಲ ಕಾನೂನು ಸೇವಾ ನೀಡುಗರಾಗಿದ್ದರು.   ಅವರು 2019 ರಲ್ಲಿ ಸಿಕ್ವೊಯಾದ ದಕ್ಷಿಣ ಪೂರ್ವ  ಏಷ್ಯಾದ ಕಾನೂನು ನಿರ್ದೇಶಕರಾಗಿ ತಮ್ಮ ಹುದ್ದೆಯನ್ನು  ತೊರೆದರು. ಹೊಸ ಹೂಡಿಕೆಗಳು, ಸುತ್ತುಗಳ ಅನುಸಾರಣೆ ಮತ್ತು ಹಲವಾರು ನ್ಯಾಯವ್ಯಾಪ್ತಿಗಳ  ನಿರ್ಗಮನಗಳನ್ನೂ ಸೇರಿದಂತೆ  1,500 ಕ್ಕೂ ಹೆಚ್ಚು ಅನುಭವವು ಅವರು ಹೊಂದಿದ್ದಾರೆ. ಸಿಕ್ವೊಯಾಗೆ ಮುಂಚಿತವಾಗಿ   ಸಂದೀಪ್ ಇಂಟೆಲ್ ನಲ್ಲಿ  ಕೆಲಸ ಮಾಡಿದರು, ಅಲ್ಲಿ ಅವರು ಇಂಟೆಲ್ ತಂತ್ರಜ್ಞಾನದ ದಕ್ಷಿಣ ಏಷ್ಯಾ ಜನರಲ್ ಕೌನ್ಸಿಲ್ ಆಗಿದ್ದರು ಮತ್ತು ಇಂಟೆಲ್ ಕ್ಯಾಪಿಟಲ್ಲಿನ ದಕ್ಷಿಣ ಏಷ್ಯಾ ಹಿರಿಯ ವಕೀಲ (ಸೀನಿಯರ್ ಅಟೊರ್ನಿ)ಆಗಿದ್ದರು.

 

ಶೇಷಾದ್ರಿ ಪಿ.ಎಸ್ (ಶೇಷ್)

ಹಿರಿಯ ನಿರ್ದೇಶಕರು, CISO ಕಚೇರಿ, ಯುನಿಸಿಸ್

ತಯಾರಿಕೆ,  ಎಂಜಿನಿಯರಿಂಗ್ ಸೇವೆಗಳು ಮತ್ತು ಐಟಿ ಸೇವೆಗಳಂತಹ ವಿವಿಧ ಕೈಗಾರಿಕಾ ರಂಗಗಳಲ್ಲಿ  ಶೇಷಾದ್ರಿಯವರು  ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ.  ಅವರು ಈಗ  ಹಿರಿಯ ನಿರ್ದೇಶಕರಾಗಿ ಯುನಿಸಿಸ್ ಕಾರ್ಪೊರೇಶನ್‌ನಲ್ಲಿ  CISO ನ ಕಚೇರಿಗೆ ಸೆಕ್ಯುರಿಟಿ ಆಡಿಟ್,  ಅಪಾಯಗಳು ಮತ್ತು ಹೊಂದಾವಣೆ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಯುನಿಸಿಸ್‌ನಲ್ಲಿ ತಮ್ಮ ಈಗಿನ ಸ್ಥಾನದಿಂದ ಅವರು      ಭೌಗೋಳಿಕೆ ಮಟ್ಟದ ಸೈಬರ್ ಸೆಕ್ಯುರಿಟಿ ವೃತ್ತಿಪರರ ಒಂದು ತಂಡದ ನಾಯಕತ್ವವನ್ನು ವಹಿಸಿದ್ದಾರೆ.  ಅಲ್ಲಿ ಅವರು .     ಜಿ ಆರ್ ಸಿ ಪ್ಲಾಟ್ ಫಾರ್ಮ್ ಅನುಷ್ಠಾನ, ತೃತೀಯ ಪಕ್ಷೀಯ ಅಪಾಯ ನಿರ್ವಹಣೆ ಮತ್ತು ಬಿಸಿನೆಸ್  ಮುಂದುವರಿಕೆ ಕಾರ್ಯಕ್ರಮಗಳನ್ನೂ ಸೇರಿದಂತೆ  ಇವುಗಳ ಪರಿಹಾರಕ್ಕಾಗಿ ಬಿಸಿನೆಸ್ ಪಾಲುದಾರರ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಾ  ಸಂಸ್ತೆಯು ಹಲವಾರು ಸೆಕ್ಯುರಿಟಿ, ಆಡಳಿತ , ಅಪಾಯ, ಹೊಂದಾವಣೆ, ಮತ್ತು ಆಡಿಟ್ ಕಾರ್ಯಕ್ರಮಗಳ ಮೂಲಕ ಸಂಸ್ಥೆಯನ್ನು ರಕ್ಷಿಸಲು, ಸಮರ್ಥಗೊಳಿಸಲು ಮತ್ತು ಬೆಳೆಸಲು ನೆರವು  ನೀಡುತ್ತಿದ್ದಾರೆ. ಅವರು ಸಿಐಎಸ್ಒ ಕಚೇರಿಯಲ್ಲಿ ನಾಯಕತ್ವದ ತಂಡದ ಭಾಗವಾಗಿದ್ದಾರೆ.

ಯುನಿಸಿಸ್‌ಗೆ ಮುಂಚೆ  ಅವರು ಲಿಯರ್ ಕಾರ್ಪೊರೇಷನ್, 24/7 ai ಮತ್ತು ಟಾಟಾ ಟೆಕ್ನಾಲಜೀಸ್‌ಗಳಂತಹ ಕಂಪನಿಗಳಲ್ಲಿ ಕೆಲಸ ಮಾಡಿದ್ದರು..  ಅಲ್ಲಿ ಅವರು ಮಾರಾಟ, ಬಿಸಿನೆಸ್ ಬೆಳವಣಿಗೆ,  ವಿನ್ಯಾಸ, ಗುಣಮಟ್ಟ, ಕಾರ್ಯಾಚರಣೆಗಳು ಮತ್ತು ಮಾರಾಟಗಾರರ ನಿರ್ವಹಣೆಗಳಂತಹ ಎಲ್ಲ ಅಂಶಗಳಲ್ಲಿ   ನಿರತರಾಗಿದ್ದರು.

ಅವರು ಬೆಂಗಳೂರು ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಮತ್ತು ಕೋಜಿಕೊಡೆಯಲ್ಲಿ ಮ್ಯಾನೇಜುಮೆಂಟು     ಸರ್ಟಿಫಿಕೇಟ್  ಕೋರ್ಸನ್ನು ಮಾಡಿದ್ದಾರೆ.   ಸೈಬರ್‌ ಸೆಕ್ಯುರಿಟಿ ಕ್ಷೇತ್ರದಲ್ಲಿ ಅವರು  ವಿವಿಧ ಉದ್ಯಮ ಮತ್ತು NIST, PCI, ISO, SSAE 18 ಗಳಂತಹ ನಿಯಂತ್ರಕ ಮಾನದಂಡಗಳಲ್ಲಿ ಸಾಬೀತಾದ  ಪರಿಣತಿಯೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಹಾಗೆಯೇ ಅಪ್ಲಿಕೇಶನ್, ಡೆವ್‌ಸೆಕ್ಆಪ್ಸ್, ಕ್ಲೌಡ್ , ನೆಟ್‌ವರ್ಕ್ ಮತ್ತು ಅಡಿಗಟ್ಟು ಸೆಕ್ಯುರಿಟಿಯ   ಎಲ್ಲಾ ಆಯಾಮಗಳ   ಸೆಕ್ಯುರಿಟಿ ವಿಷಯಗಳಲ್ಲಿ ಪರಿಣಿತರು. ಖಾಸಗಿತನದ  ಬಗ್ಗೆ ಅವರ ತಮ್ಮ ಆಸಕ್ತಿಯಿಂದಾಗಿ ಈಗ ಅವರು   ಐಎಪಿಪಿ ನಾಲೆಡ್ಜ್ ನೆಟ್,  ಬೆಂಗಳೂರು ಘಟಕದ   ಸಹ ಮುಖ್ಯಸ್ಥರಾಗಿದ್ದಾರೆ.  ಅವರು ಸರ್ಟಿಫೈಡ್ ಸಿಕ್ಸ್ ಸಿಗ್ಮಾ ಬ್ಲ್ಯಾಕ್ ಬೆಲ್ಟ್, ಸರ್ಟಿಫೈಡ್ ಸ್ಕ್ರಮ್ ಮಾಸ್ಟರ್ (ಸಿಎಸ್ಎಂ) ಮತ್ತು ಸರ್ಟಿಫೈಡ್ ಐಟಿಐಎಲ್ ವಿ 3 ಫೌಂಡೇಶನ್ ಆಗಿದ್ದಾರೆ.

ಶ್ರೀಧರ್ ಗೋವರ್ಧನ್

ಫ್ಲಿಪ್‌ಕಾರ್ಟ್‌ನ ಹಿರಿಯ ನಿರ್ದೇಶಕರು ಮತ್ತು ಮಾಹಿತಿ ಸೆಕ್ಯುರಿಟಿಯ ಮುಖ್ಯಸ್ಥರು

ಶ್ರೀಧರ್ರವರು  ಸ್ವಯಂ-ರಕ್ಷಣಾತ್ಮಕ ಎಂಟರ್‌ಪ್ರೈಸ್ ನೆಟ್‌ವರ್ಕ್ ಅನ್ನು ರೂಪಿಸುವಲ್ಲಿ ಮತ್ತು ಉದ್ಯೋಗಿಗಳಲ್ಲಿ ಸೆಕ್ಯುರಿಟಿ  ಜಾಗೃತ ನಡವಳಿಕೆಯನ್ನು ಉಂಟುಮಾಡುವಲ್ಲಿ ಸಾಂಸ್ಥಿಕ ಮುಂದೊಡಗುಗಳನ್ನು ನಾಯಕತ್ವವನ್ನು ವಹಿಸಿರುವ ಹಿನ್ನೆಲೆಯುಳ್ಳ  ಕ್ರಿಯಾಶೀಲ ಸೈಬರ್ ಸೆಕ್ಯುರಿಟಿ ನಾಯಕರಾಗಿದ್ದಾರೆ.

ಈ ಹಿಂದೆ  ಅವರು ವಿಪ್ರೊ ಲಿಮಿಟೆಡ್‌ನ ಮುಖ್ಯ ಮಾಹಿತಿ ಸೆಕ್ಯುರಿಟಿ ಅಧಿಕಾರಿಯಾಗಿದ್ದರು (ಸಿಐಎಸ್‌ಒ) ಮತ್ತು ಈಗ ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಿರಿಯ ನಿರ್ದೇಶಕರು ಮತ್ತು ಮಾಹಿತಿ ಸೆಕ್ಯುರಿಟಿಯ ಮುಖ್ಯಸ್ಥರಾಗಿದ್ದರು.

ಶ್ರೀಧರ್ ರವರು ಸೈಬರ್ ರಕ್ಷಣೆ, ಡಾಟಾ  ಸಂರಕ್ಷಣೆ ಮತ್ತು ನಿಯಂತ್ರಕ ಹೊಂದಾವಣೆಯಂತಹ   ಬಿಸಿನೆಸ್ ಪ್ರಮುಖ ಕ್ಷೇತ್ರದಲ್ಲಿ 20 ವರ್ಷಗಳ ಕಾಲದ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ. ಹಾಗೆಯೇ ಸೆಕ್ಯುರಿಟಿ ತಂತ್ರಜ್ಞಾನದ ಎಲ್ಲ ಪ್ರಮುಖ ಮಾಹಿತಿ ಕ್ಷೇತ್ರದಲ್ಲಿ ವ್ಯಾಪಕವಾದ ಕೆಲಸವನ್ನು ಮಾಡಿದ್ದಾರೆ.  

ಅವರು  ಐಟಿ, ಮಾಹಿತಿ ಸೆಕ್ಯುರಿಟಿ, ಸೆಕ್ಯುರಿಟಿ ಫ್ರೇಮ್ ವರ್ಕ್ ಮತ್ತು ಸುರಕ್ಷಿತ ಎಂಟರ್ಪ್ರೈಸ್ ಆರ್ಕಿಟೆಕ್ಚರ್ (ಸಾಬ್ಸಾ, ಸಿಐಎಸ್ಎ, ಸಿಐಎಸ್ಎಂ) ಕ್ಷೇತ್ರಗಳಲ್ಲಿ 11 ಉದ್ಯಮ-ಮಾನ್ಯತೆ ಪಡೆದ ಪ್ರಮಾಣೀಕರಣಗಳನ್ನು ಪಡೆದುಕೊಂಡಿದ್ದಾರೆ.

ಅವರು ಪಿಲಾನಿಯ BITS ನಿಂದ ಇಂಜಿನಿಯರಿಂಗ್‌ ಪದವಿ ಮತ್ತು  ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಗ್ನಿಟಿವ್ ಸೆಕ್ಯುರಿಟಿಯಲ್ಲಿ ಮೂರು ಪೇಟೆಂಟ್‌ಗಳ ಅರ್ಜಿ ಹಾಕಿದ್ದಾರೆ(ಕಾಯುತ್ತಿದ್ದಾರೆ). ಫೋರ್ಬ್ಸ್ ಏಷ್ಯಾ ಮತ್ತು ಡಿಎಸ್ ಸಿ ಐ  ಪ್ರಕಟಿಸಿದ “ಇನ್ಸೈಡರ್ ತ್ರೆಟ್” ಪುಸ್ತಕದ  ಸಹ-ಲೇಖಕರಾಗಿದ್ದಾರೆ.  

ಶ್ರೀನಿವಾಸ್ ಅವಸರಲಾ

ಪ್ರಾಡಕ್ಟ್   ಬಾಲ್ಬಿಕ್ಸ್  ಉಪಾಧ್ಯಕ್ಷರು

ಶ್ರೀನಿವಾಸ್ ರವರು  ಯಶಸ್ವಿ ಸ್ಟಾರ್ಟ್ ಅಪ್ ಮತ್ತು ದೊಡ್ಡ ಕಂಪನಿಗಳಿಂದ ಉತ್ಪನ್ನ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಅನುಭವದ ಬಲವಾದ ದಾಖಲೆಯನ್ನು ಹೊಂದಿದ್ದಾರೆ. ಬಾಲ್ಬಿಕ್ಸ್ಗೆ  ಮುಂಚೆ, ಕ್ಲೌಡ್ ಆಕ್ಸೆಸ್ ಸೆಕ್ಯುರಿಟಿ ಬ್ರೋಕರ್ (ಸಿಎಎಸ್‌ಬಿ) ಪ್ಲಾಟ್‌ಫಾರ್ಮ್ ಕಂಪನಿಯಾದ ಎಲಾಸ್ಟಿಕಾವನ್ನು ಸ್ವಾಧೀನಪಡಿಸಿಕೊಂಡ ನಂತರ  ಅವರು ಸಿಮ್ಯಾಂಟೆಕ್‌ನಲ್ಲಿ ಕ್ಲೌಡ್  ಸೆಕ್ಯುರಿಟಿ  ಉತ್ಪನ್ನ ನಿರ್ವಹಣೆಯಲ್ಲಿ ಉಪಾಧ್ಯಕ್ಷರಾಗಿದ್ದರು.

ಅದಕ್ಕೂ ಮೊದಲು, ಅವರು ಪಾಲೊ ಆಲ್ಟೊ ನೆಟ್‌ವರ್ಕ್ಸ್  ನಲ್ಲಿ ಅಪ್ಲಿಕೇಶನ್ ಲೇಯರ್ ಸೆಕ್ಯುರಿಟಿ (ಆಪ್-ಐಡಿ)  ಮತ್ತು ಎಲ್ಲಾ ಫೈರ್‌ವಾಲ್ ಇಂಟಿಗ್ರೇಷನ್ ಇಂಟರ್ಫೇಸ್‌ಗಳನ್ನು ನಿರ್ವಹಿಸುತ್ತಿದ್ದರು. ಈಗ ಸಿಸ್ಕೋದ ಭಾಗವಾಗಿರುವ ಆಂಡಿಯಾಮೊದಲ್ಲಿ ಅವರು ಎಂಜಿನಿಯರಾಗಿ ಕಾರ್ಯ  ನಿರ್ವಹಿಸಿದರು. ಅವರು ಹಲವಾರು  ಅಮೆರಿಕ ಪೇಟೆಂಟ್‌ಗಳನ್ನು ಹೊಂದಿದ್ದಾರೆ ಮತ್ತು ಕಂಪ್ಯೂಟರ್ ನೆಟ್‌ವರ್ಕಿಂಗ್ ಪತ್ರಿಕೆಗಳಲ್ಲಿ ಅವರ  ಲೇಖನಗಳು ಪ್ರಕಟವಾಗಿದೆ. ಅವರು ಅಮೆರಿಕಾದ  ಬರ್ಕ್ಲಿಯಿಂದ ಎಂಬಿಎ ಮತ್ತು ಪರ್ಡ್ಯೂನಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ.  

ವಿನೋದ್ ಗಣಪತಿ

ಸಹಾಯಕ ಪ್ರಾಧ್ಯಾಪಕರು, ಕಂಪ್ಯೂಟರ್ ಸೈನ್ಸ್ ಮತ್ತು ಆಟೊಮೇಷನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು

ವಿನೋದ್ ರವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಆಟೊಮೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಐಐಎಸ್ಸಿಯನ್ನು  ಸೇರುವ ಮೊದಲು, 2007 ರಿಂದ 2017 ರವರೆಗೆ ಅವರು ರಟ್ಜರ್ಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಧ್ಯಾಪಕರಾಗಿದ್ದರು. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಿಂದ 2007 ರಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ   ಪಿಎಚ್.ಡಿ. ಪಡೆದರು  ಮತ್ತು 2001 ರಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಗಳಿಸಿದರು. ಅವರು ಭಾರತದ ಉದ್ಯಾನ ನಗರ ಮತ್ತು ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ಬೆಳೆದರು. ಕಂಪ್ಯೂಟರ್ ಸೆಕ್ಯುರಿಟಿ ಕುರಿತಂತೆ  ಸಂಶೋಧನೆ ಮಾಡುವಲ್ಲಿ ಅವರು ಮೊದಲಿಗೆ  ಗಮನ ಹರಿಸಿದ್ದರು.  ಅವರು ಐಐಎಸ್ಸಿಯಲ್ಲಿ  ಕಂಪ್ಯೂಟರ್ ಸಿಸ್ಟಮ್ಸ್ ಸೆಕ್ಯುರಿಟಿ ಲ್ಯಾಬೊರೇಟರಿಯನ್ನು ನಿರ್ದೇಶಿಸುತ್ತಾರೆ.  ಅಲ್ಲಿ ಅವರ ತಂಡವು  ಉತ್ತಮ ಭದ್ರತಾ ಖಾತರಿಗಳೊಂದಿಗೆ ಪ್ರಾಯೋಗಿಕ ಕಂಪ್ಯೂಟರ್ ವ್ಯವಸ್ಥೆಗಳನ್ನು ನಿರ್ಮಿಸಲು ಪ್ರಯತ್ನ ಮಾಡುತ್ತದೆ. ವೆಬ್ ಬ್ರೌಸರ್‌ಗಳ ಮೂಲಕ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳಿಂದ ಮೊಬೈಲ್ ಸಾಧನಗಳವರೆಗೆ ಅವರ ಸಂಶೋಧನಾ ಯೋಜನೆಗಳು ವ್ಯಾಪಕ ವ್ಯಾಪ್ತಿಯಲ್ಲಿ ಕಂಪ್ಯೂಟರ್ ವ್ಯವಸ್ಥೆಗಳ   ಭದ್ರತಾ ಸಮಸ್ಯೆಗಳನ್ನು ಪರಿಗಣಿಸಿವೆ. ಅವರು ಹಲವಾರು ಆಸಕ್ತಿಗಳನ್ನು ಹೊಂದಿದ್ದಾರೆ. ಸಾಮಾನ್ಯವಾಗಿ  ಅವರ ಯೋಜನೆಗಳು ಅನ್ವಯಿಕ ಕ್ರಿಪ್ಟೋಗ್ರಫಿ, ಪ್ರೋಗ್ರಾಂ ವಿಶ್ಲೇಷಣೆ, ಔಪಚಾರಿಕ ವಿಧಾನಗಳು, ಯಂತ್ರ ಬುದ್ಧಿಮತ್ತೆ ಮತ್ತು ಹಾರ್ಡ್ ವೇರ್ ಆರ್ಕಿಟೆಕ್ಚರ್ ಗಳಂತಹ  ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಿದ ವಿಚಾರಗಳು ಮತ್ತು ವಿಧಾನಗಳ ಕುರಿತಾಗಿರುತ್ತವೆ.

ವಿಶ್ವಾಸ್ ಮನ್ರಾಲ್

ಕ್ಲೌಡ್  ಮ್ಯಾಕಫೀನ ಪ್ರಮುಖ ಕಂಟೇನರ್ ಸೆಕ್ಯುರಿಟಿ ಮತ್ತು ಚೀಫ್ ಆರ್ಕಿಟೆಕ್ಟ್   

ವಿಶ್ವಾಸ್ ರವರು  ವಿಶ್ವದ ಅತಿದೊಡ್ಡ ಪ್ಯೂರ್ ಪ್ಲೇ ಸೆಕ್ಯುರಿಟಿ   ಕಂಪನಿ ಯಾದ ಕ್ಲೌಡ್  ಮ್ಯಾಕಫೀನ ಪ್ರಮುಖ ಕಂಟೇನರ್ ಸೆಕ್ಯುರಿಟಿ ಮತ್ತು ಚೀಫ್ ಆರ್ಕಿಟೆಕ್ಟ್ . ತಾವು ಸ್ಥಾಪಕರಾಗಿದ್ದ  ಕಂಪನಿಯಾದ  ನ್ಯಾನೊಸೆಕ್ ಅನ್ನು  ಸ್ವಾಧೀನಪಡಿಸಿಕೊಂಡ ನಂತರ ಅವರು ಮ್ಯಾಕಫೀಗೆ ಬಂದರು. ಈ ಹಿಂದೆ ಇಯೋನೋಸ್ ನೆಟ್‌ವರ್ಕ್ಸ್ ಮತ್ತು ಲೈವ್ ರೀಚ್ ಮೀಡಿಯಾವನ್ನು ಕೂಡ  ಅವರು  ಸಹ ಸ್ಥಾಪಿಸಿದ್ದಾರೆ.  ಅವರು ನೆಟ್‌ವರ್ಕಿಂಗ್ ಮತ್ತು ಸೆಕ್ಯುರಿಟಿ ಕುರಿತಂತೆ 30 ಕ್ಕೂ ಹೆಚ್ಚು ಆರ್‌ಎಫ್‌ಸಿ ಗಳು ಮತ್ತು ಮಾನದಂಡಗಳನ್ನು ಬರೆದ ತಂತ್ರಜ್ಞರಾಗಿದ್ದಾರೆ.

ಸಿಇಒ, ಸೆಂಟರ್ ಫಾರ್ ಇ-ಗವರ್ನನ್ಸ್, ಕರ್ನಾಟಕ ರಾಜ್ಯ ಸರ್ಕಾರ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

ಇವರು ಐಐಟಿ ಕಾನ್ಪುರದಿಂದ ಬಿಟೆಕ್ ಇಇ ಅಧ್ಯಯನ ಮಾಡಿದರು ಮತ್ತು 1998 ಸಾಲಿನ ಭಾರತೀಯ ಅರಣ್ಯ ಸೇವೆ (ಐ.ಎಫ್.ಎಸ್) ಅಧಿಕಾರಿ.  ಈ  ಹಿಂದೆ ಅವರು ಕರ್ನಾಟಕ ಅರಣ್ಯ ಇಲಾಖೆಯ  ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ವ್ಯವಸ್ಥೆ ಯೋಜನಾ ನಿರ್ದೇಶಕರು,   ಬೆಂಗಳೂರು ಒನ್ ಮತ್ತು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯದ  ನಿರ್ದೇಶಕರು,  ಕರ್ನಾಟಕ ವೈಡ್ ಏರಿಯಾ ನೆಟ್‌ವರ್ಕ್ , ರಾಜ್ಯ ದತ್ತಾಂಶ ಕೇಂದ್ರ, ಕರ್ನಾಟಕ ಸಾರ್ವಜನಿಕ ಖರೀದಿ ವ್ಯವಸ್ಥೆ ಯೋಜನಾ ನಿರ್ದೇಶಕರು ಮತ್ತು ಕರ್ನಾಟಕ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ಯೋಜನಾ ನಿರ್ದೇಶಕರಾಗಿದ್ದರು.  

ವಿಶಾಲ್ ಸಾಲ್ವಿ

ಇನ್ಫೋಸಿಸ್ಸಿನ  ಸಿಐಎಸ್ಒ ಮತ್ತು ಸೈಬರ್ ಸೆಕ್ಯುರಿಟಿ ಪ್ರಾಕ್ಟೀಸ್ ಮುಖ್ಯಸ್ಥರು  

ವಿಶಾಲ್ ಸಾಲ್ವಿಯವರು  ಇನ್ಫೋಸಿಸ್ ಸಂಸ್ಥೆಯ  ಹಿರಿಯ ಉಪಾಧ್ಯಕ್ಷರು, ಮುಖ್ಯ ಮಾಹಿತಿ ಸೆಕ್ಯುರಿಟಿ ಅಧಿಕಾರಿ ಮತ್ತು ಸೈಬರ್ ಸೆಕ್ಯುರಿಟಿ ಪ್ರಾಕ್ಟೀಸ್ ಮುಖ್ಯಸ್ಥರು.   ಅವರು  ಇಡಿ ಇನ್ಫೋಸಿಸ್ ಗ್ರೂಪಿನ ಒಟ್ಟಾರೆ ಮಾಹಿತಿ ಮತ್ತು ಸೈಬರ್ ಸೆಕ್ಯುರಿಟಿ  ಕಾರ್ಯತಂತ್ರ ಮತ್ತು ಅದರ ಅನುಷ್ಠಾನಕ್ಕೆ ಜವಾಬ್ದಾರರು. ಇದರೊಂದಿಗೆ ಅವರು ಉದ್ಯಮಗಳ ಸುರಕ್ಷತೆಯನ್ನು ಶಕ್ತಗೊಳಿಸುವ ಸೈಬರ್ ಸೆಕ್ಯುರಿಟಿ ಬಿಸಿನೆಸ್ ಡೆಲಿವರಿ, ಡ್ರೈವಿಂಗ್ ಸೆಕ್ಯುರಿಟಿ ಸ್ಟ್ರಾಟಜಿ, ಡೆಲಿವರಿ, ಬಿಸಿನೆಸ್ ಮತ್ತು ಆಪರೇಶನ್‌ಗಳಿಗೆ ಮತ್ತು ಅದರ ಒಟ್ಟಾರೆ ಕಾರ್ಯಗಳನ್ನು  ಸುಧಾರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ವಿಶಾಲ್ ರವರು  ಹಲವಾರು ಉದ್ದಿಮೆಗಳ ಸೈಬರ್  ಸೆಕ್ಯುರಿಟಿ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ  25ಕ್ಕೂ ಹೆಚ್ಚು  ವರ್ಷಗಳ ಕಾಲದ ಉದ್ದಿಮೆ ಅನುಭವವನ್ನು ಹೊಂದಿದ್ದಾರೆ.

ಇನ್ಫೋಸಿಸ್ಸಿಗೆ   ಸೇರುವ ಮೊದಲು, ಅವರು ಪಿಡಬ್ಲ್ಯೂಸಿ (ಪಾಲುದಾರ ಸೈಬರ್ – 2 ವರ್ಷಗಳು), ಎಚ್ ಡಿ ಎಫ್ ಸಿ  ಬ್ಯಾಂಕ್ (ಎಸ್ ವಿಪಿ ಮತ್ತು ಸಿಐಎಸ್ಒ – 8 ವರ್ಷಗಳು), ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (ಎಸ್ ವಿಪಿ ಮತ್ತು ಹೆಡ್ ಸೈಬರ್ ಒಪಿಎಸ್ – 11 ವರ್ಷಗಳು) ಗ್ಲೋಬಲ್ ಟ್ರಸ್ಟ್ ಬ್ಯಾಂಕ್ (ಐಟಿ ಒಪಿಎಸ್), ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್ (ಐಟಿ ಒಪಿಎಸ್) ಮತ್ತು ಕ್ರಾಂಪ್ಟನ್ ಗ್ರೀವ್ಸ್ (ಐಟಿ ಸೇಲ್ಸ್)ಗಳಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಹಲವಾರು ನಾಯಕತ್ವ  ಪಾತ್ರಗಳನ್ನು ವಹಿಸಿದ್ದರು. ವಿಶಾಲ್ ರವರು ಡ್ರೈವಿಂಗ್ ಟ್ರಾನ್ಸ್ ಫಾರ್ಮೇಷನ್  ಸೈಬರ್ ಸೆಕ್ಯುರಿಟಿ ಪ್ರೊಗ್ರಾಂಸ್ , ನೀತಿ, ಮಾನದಂಡಗಳು, ಕಾರ್ಯವಿಧಾನಗಳು,  ಅರಿವು, ಗುರುತು ಮತ್ತು ಪ್ರವೇಶ ನಿರ್ವಹಣೆ, ಐಟಿ-ಜಿಆರ್ ಸಿ, ನೆಟ್‌ವರ್ಕ್ ಸೆಕ್ಯುರಿಟಿ, ಇನ್ಸಿಡೆಂಟ್ ರೆಸ್ಪಾನ್ಸ್, ಸೆಕ್ಯುರಿಟಿ ಮಾನಿಟರಿಂಗ್, ಮಾಲ್ವೇರ್ ರಕ್ಷಣೆ, ಸೈಬರ್ ವಂಚನೆ ನಿರ್ವಹಣೆ, ಸೆಕ್ಯುರಿಟಿ ಸಂರಚನೆ, ಹೊಂದಾವಣೆ, ಆನ್-ಲೈನ್ ಬ್ಯಾಂಕಿಂಗ್ ಮತ್ತು ಇ ಕಾಮರ್ಸ್, ಕ್ರಿಪ್ಟೋಗ್ರಫಿ, ಡೇಟಾ ಪ್ರೊಟೆಕ್ಷನ್, ತರ್ಡ್ ಪಾರ್ಟಿ ಮ್ಯಾನೇಜುಮೆಂಟ್, ಬಿಸಿನೆಸ್ ಕಂಟಿನ್ಯೂಟಿ ಪ್ಲಾನಿಂಗ್, ಸೈಬರ್ ಡಿಫೆನ್ಸ್ ಸೆಂಟರ್ಸ್ ಮತ್ತು ಕ್ಲೌಡ್ ಸೆಕ್ಯುರಿಟಿ ಇತ್ಯಾದಿ ಎಲ್ಲ ಪ್ರಮುಖ ಅಂಶಗಳ ಡೆಲಿವರಿ ಮತ್ತು ಮಾರಾಟದಲ್ಲಿ ವ್ಯಾಪಕ ಮ್ಯಾನೇಜುಮೆಂಟ್  ಮತ್ತು ಕ್ಷೇತ್ರ  ಅನುಭವವನ್ನು ಹೊಂದಿದ್ದಾರೆ.