“ಐಡೆಂಟಿಟಿ ಮತ್ತು ಆಕ್ಸೆಸ್ ಮ್ಯಾನೇಜ್‌ಮೆಂಟ್ (IAM)” ವಿಷಯದ ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 21

Date/s: 12 Aug 2020

Venue: Webex

Organising Partners: ಸೈಸೆಕ್ (CySecK )


ವೆಬಿನಾರ್‌ಗಳ  ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK )  “ಐಡೆಂಟಿಟಿ ಮತ್ತು ಆಕ್ಸೆಸ್ ಮ್ಯಾನೇಜ್‌ಮೆಂಟ್ (IAM)” ವಿಷಯದ ಕುರಿತು ವಿದ್ಯಾರ್ಥಿಗಳು / ಬೋಧಕವರ್ಗ / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರನ್ನು  ನಡೆಸುತ್ತಿದೆ. ಈ ವೆಬಿನಾರನ್ನು ಡೆಲಾಯ್ಟ್ನ  .ರವೀಂದ್ರ ಉಸ್ಮಾನ್‌ಪುರ್ಕರ್ ಮತ್ತು ಪಂಕಜ್ ಜೋಶಿ ನಡೆಸಿಕೊಡಲಿದ್ದಾರೆ.

ದಿನಾಂಕ: 12 ಆಗಸ್ಟ್ 2020

ಸಮಯ: ಸಂಜೆ 5:00 ರಿಂದ 6:30

ನೋಂದಣಿ ಲಿಂಕ್: https://forms.gle/BiiU17oAwyGGE92DA

ವಿಷಯದ ಸಂಕ್ಷಿಪ್ತ ಪರಿಚಯ:

ಒಂದು  ಸಂಸ್ಥೆಯ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ “ಐಡೆಂಟಿಟಿ ಮತ್ತು ಆಕ್ಸೆಸ್ ಮ್ಯಾನೇಜ್‌ಮೆಂಟ್ (IAM)” ಪ್ರಮುಖ ಪಾತ್ರ ವಹಿಸುತ್ತದೆ. ಇದು ಸೂಕ್ತ ಜನರು  ಸೂಕ್ತ ಸಮಯದಲ್ಲಿ ಸೂಕ್ತ ಉದ್ಯಮ ಸಂಪನ್ಮೂಲಗಳು / ಸ್ವತ್ತುಗಳಿಗೆ ಸೂಕ್ತ ಅವಕಾಶವನ್ನು ಹೊಂದುವುದನ್ನು  ಖಾತ್ರಿ ಪಡಿಸುತ್ತದೆ. IAM ಎಂದರೇನು ಎಂಬ ವಿಷಯದ ಬಗ್ಗೆ ತಿಳಿಯಲು,   ಸೈಬರ್ ಅಪಾಯಗಳನ್ನು ಪರಿಹರಿಸಲು ಇದು ಹೇಗೆ ಸಹಾಯ ಮಾಡುತ್ತದೆ ಮತ್ತು    ಹೇಗೆ ಇದನ್ನು ವೃತ್ತಿಯಾಗಿ ಮಾಡಿಕೊಳ್ಳಬಹುದೆಂಬುದನ್ನು ತಿಳಿಯಲು ವೆಬಿನಾರಿನಲ್ಲಿ ಭಾಗಿಯಾಗಿ.

ಇದು ಯಾರಿಗೆ?:

ಮಾಹಿತಿ ತಂತ್ರಜ್ಞಾನದ ಮೂಲ ತಿಳುವಳಿಕೆಯುಳ್ಳವರು ಇದರಲ್ಲಿ ಭಾಗಿಯಾಗಬಹುದು.

ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ನಡೆಯುತ್ತದೆ.

ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು  ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.