"ಕ್ಲೌಡ್ ಆಕ್ಸೆಸ್ ಸೆಕ್ಯುರಿಟಿ ಬ್ರೋಕರ್ (CASB) ಕುರಿತು ಪರಿಚಯ" ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ - 19
Date/s: 29 Jul 2020
Venue: Webex
Organising Partners: ಸೈಸೆಕ್ (CySecK) ಮತ್ತು ಮೆಕಫಿ
ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK ) – “ಕ್ಲೌಡ್ ಆಕ್ಸೆಸ್ ಸೆಕ್ಯುರಿಟಿ ಬ್ರೋಕರ್ (CASB) ಕುರಿತು ಪರಿಚಯ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಮೆಕಫಿಯ ಪಾಲುದಾರಿತ್ವದಲ್ಲಿ ನಡೆಸಲಾಗುತ್ತಿದೆ.
ಸಮಯ: ಸಂಜೆ 5:00 ರಿಂದ 6:30
ದಿನಾಂಕ: 29-07-2020
ಸಂಕ್ಷಿಪ್ತ ಪರಿಚಯ:
ಮೆಕಫಿ MVISION ಕ್ಲೌಡ್ ಎಂಬುದು ಒಂದು ಪ್ರಮುಖ ಕ್ಲೌಡ್ ಆಕ್ಸೆಸ್ ಸೆಕ್ಯುರಿಟಿ ಬ್ರೋಕರ್ (CASB). ಇದು ಕ್ಲೌಡ್-ಆಧಾರಿತ, ಬಹು-ಗ್ರಾಹಕ ಸೇವೆಯಾಗಿದೆ. ಇದು ಸೂಕ್ತ ಆಡಳಿತ ಮತ್ತು ಸುರಕ್ಷತೆಯೊಂದಿಗೆ ಕ್ಲೌಡ್ ಸೇವೆಗಳನ್ನು ಪಡೆಯಲು ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ. ಇದು ಕಂಪನಿಗಳ ಒಟ್ಟಾರೆ ಅಪಾಯ ಸನ್ನಿವೇಶ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.
MVISION ಕ್ಲೌಡ್ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುತ್ತದೆ:
- ಕ್ಲೌಡ್ ಡಿಸ್ಕವರಿ ಮತ್ತು ಅಪಾಯದ ನಿಯಂತ್ರಂಣ
- ಕ್ಲೌಡ್ ಬಳಕೆ ವಿಶ್ಲೇಷಣೆ
- ಕ್ಲೌಡ್ ಮತ್ತು ನಿಯಂತ್ರಣ
ಇದು ಯಾರಿಗೆ:
ಕ್ಲೌಡ್ ಸೇವಾ ವ್ಯವಸ್ಥೆಗಳನ್ನು ತಿಳಿಯುವುದು ಮತ್ತು ಸಂಗ್ರಹಣೆ, ಸಹಯೋಗ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಹಲವಾರು ವಿಧಗಳ ಮಾರಾಟಗಾರರು ನೀಡುವ ಸೇವೆಗಳ ಬಗ್ಗೆ ತಿಳುವಳಿಕೆ ಹೊಂದಿರುವವರು.
ಗಮನಿಸಿ: ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.