“ಸೈಬರ್-ಫಿಸಿಕಲ್ ಸಿಸ್ಟಂಗಳಲ್ಲಿ ಸೆಕ್ಯುರಿಟಿ/ಭದ್ರತೆ ಮತ್ತು ಖಾಸಗಿತನ” ಗಳ ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 11
Date/s: 03 Jun 2020
Organising Partners: ಸಂಘಟನಾ ಪಾಲುದಾರರು: ಸೈಸೆಕ್ (CySecK )ಮತ್ತು ಐ ಐ ಎಸ್ ಸಿ (IISc)
ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK ) “ಸೈಬರ್-ಫಿಸಿಕಲ್ ಸಿಸ್ಟಂಗಳಲ್ಲಿ ಭದ್ರತೆ ಮತ್ತು ಖಾಸಗಿತನ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ (IISc) ಪ್ರೊ.ವೈಭವ್ ಕಟೇವಾ ನಡೆಸಿಕೊಡಲಿದ್ದಾರೆ.
ವಿಷಯದ ಕುರಿತು ಒಂದು ಸಂಕ್ಷಿಪ್ತ ಪರಿಚಯ:
ಈ ವೆಬಿನಾರಿನಲ್ಲಿ ಸೈಬರ್-ಫಿಸಿಕಲ್ ಸಿಸ್ಟಂಗಳು , ಇಂತಹ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಾಗ ಎದುರಾಗುವ ಸವಾಲುಗಳು ಮತ್ತು ಇದರಿಂದಾಗುವ ಪ್ರಯೋಜನಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಇಲ್ಲಿ ನಾವು ನಿರ್ದಿಷ್ಟವಾಗಿ ಸುರಕ್ಷತೆ ಮತ್ತು ಖಾಸಗಿತನದ ವಿಷಯಗಳ ಬಗ್ಗೆ ಕೇಂದ್ರೀಕರಿಸುತ್ತೇವೆ. ವಿವಿಧ ರೀತಿಯ ಸೈಬರ್-ಫಿಸಿಕಲ್ ದಾಳಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತೇವೆ ಮತ್ತು ಇದರೊಂದಿಗೆ ಸಾಧ್ಯವಾದಲ್ಲಿ ಪರಿಹಾರ ಕ್ರಮಗಳನ್ನೂ ಹೇಳಲಾಗುತ್ತದೆ. ಇದಲ್ಲದೆ, ನಾವು ಈ ಸಿಸ್ಟಂಗಳಲ್ಲಿ ಖಾಸಗಿತನದ ಅಗತ್ಯದ ಕುರಿತು ತಿಳಿಸುತ್ತೇವೆ ಮತ್ತು ವಿವಿಧ ರೀತಿಯ ಖಾಸಗಿತನದ ಸಾಧ್ಯತೆಗಳ ಕಾರ್ಯವಿಧಾನಗಳನ್ನು ಚರ್ಚಿಸುತ್ತೇವೆ. ಈ ಕಾರ್ಯವಿಧಾನಗಳಲ್ಲಿ ಡಿಫರೆನ್ಷಿಯಲ್ (ಭೇದಾತ್ಮಕ) ಖಾಸಗಿತನ ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಡುತ್ತೇವೆ.
ಉದ್ದೇಶಿತ ಭಾಗಿದಾರರು ಯಾರು?:
ಸೈಬರ್-ಫಿಸಿಕಲ್ ಸಿಸ್ಟಂಗಳಲ್ಲಿ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಒಂದು ಸಾಮಾನ್ಯ ತಿಳಿವಳಿಕೆ ಹೊಂದಲು ಇಷ್ಟಪಡುವ ವ್ಯಕ್ತಿಗಳು.
ಈ ವೆಬಿನಾರಿನಲ್ಲಿ ಸುರಕ್ಷತೆ ಮತ್ತು ಖಾಸಗಿತನಗಳಿಗಾಗಿ “ಕೇವಲ ಸೈಬರ್” ತಂತ್ರಗಳಿಗಿಂತ ಹೆಚ್ಚಾಗಿ ಸಿಸ್ಟಂಗಳ “ಫಿಸಿಕಲ್/ಭೌತಿಕ” ಅಂಶದ ಬಗ್ಗೆ ಹೆಚ್ಚು ಗಮನ ಹರಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ವಿದ್ಯಾರ್ಥಿಗಳು ಹೊಂದಿರಬೇಕಾದ ಯಾವುದೇ ಅವಶ್ಯಕತೆಗಳು:
ಏನೂ ಇಲ್ಲ.
ಪ್ರಯೋಜನಗಳು:
- ಸೈಬರ್- ಫಿಸಿಕಲ್ ಸಿಸ್ಟಂಗಳನ್ನು ರೂಪಿಸುವಾಗ ಸುರಕ್ಷತೆ ಮತ್ತು ಖಾಸಗಿತನ ಕ್ರಮಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬಹುದು.
- “ಸೈಬರ್- ಫಿಸಿಕಲ್ ಸೆಕ್ಯುರಿಟಿ/ಭದ್ರತೆ” ಮತ್ತು “ಸೈಬರ್- ಸೆಕ್ಯುರಿಟಿ/ಭದ್ರತೆ” ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು
- “ಡಿಫರೆನ್ಷಿಯಲ್ ಖಾಸಗಿತನ” ದ ಮೂಲಾಂಶಗಳ ಬಗ್ಗೆ ಕಲಿಯುವುದು
ದಿನಾಂಕ: 3 ಜೂನ್ 2020
ಸಮಯ: ಸಂಜೆ 5:00 ರಿಂದ 6:30
ಸಭೆಯ ನಂತರ ಪ್ರಶ್ನೋತ್ತರ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.
ಇದರಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು.