ಆನ್‌ಲೈನ್ ವೆಬಿನಾರ್ "ನೆಟ್‌ವರ್ಕ್ ಸೆಕ್ಯುರಿಟಿ ಮತ್ತು ಅಪ್ಲಿಕೇಷನ್ ಸೆಕ್ಯುರಿಟಿ" ಕುರಿತು - ಸಂಗಚ್ಛಧ್ವಂ ಸರಣಿ ವೆಬಿನಾರ್ 8
Date/s: 13 May 2020
Organising Partners: ಸಂಘಟನಾ ಪಾಲುದಾರರು: CySecK ಮತ್ತು CISCO
ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ – “ನೆಟ್‌ವರ್ಕ್ ಸೆಕ್ಯುರಿಟಿ ಮತ್ತು ಅಪ್ಲಿಕೇಷನ್ ಸೆಕ್ಯುರಿಟಿ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ವೃತ್ತಿನಿರತರರಿಗೆ ಉಚಿತ ವೆಬಿನಾರನ್ನು CySecK ನಡೆಸುತ್ತಿದೆ. ಈ ವೆಬಿನಾರ್ CISCOನ ಸಹಭಾಗಿತ್ವದಲ್ಲಿದೆ.
ಸಣ್ಣ ಪರಿಚಯ
ಸುತ್ತಲೂ ಬೇಲಿ ಕಟ್ಟುವುದು ಹಳೆ ವಿಧಾನದ ಸುರಕ್ಷತೆಯಾಗಿತ್ತು. ಇದು ನಿಮ್ಮ ಮನೆಯನ್ನು ರಕ್ಷಿಸಬಹುದೇ ಹೊರತು ಸೈಬರ್ ಜಗತ್ತನ್ನಲ್ಲ. ಈಗಿನ ಸೈಬರ್ ಸುರಕ್ಷತೆಯ ವಿಚಾರವೆಂದರೆ “ನಂಬಿಕೆಯೇ ಇಲ್ಲದಿರುವುದು(ನಂಬಿಕೆ ಶೂನ್ಯ)”. ಈ ನಂಬಿಕೆಯೇ ಇಲ್ಲದಿರುವುದನ್ನು ಅರಿಯಲು ಹಲವು ಆಧಾರಗಳಿವೆ. ಪರಸ್ಪರ ಸಂಪರ್ಕ ಹೆಚ್ಚು ಹೊಂದುತ್ತಿರುವ ಈಗಿನ ಜಗತ್ತಿನಲ್ಲಿ ಸೆಕ್ಯುರಿಟಿ ಅಥವಾ ಸುರಕ್ಷತೆ ಇನ್ನೂ ಬಹಳ ಹೆಚ್ಚು ಮುಖ್ಯ. ನಾವು ಈಗ ಒಬ್ಬರನ್ನೊಬ್ಬರು ಅಪ್ಲಿಕೇಷನ್ನುಗಳ ವಿಧಾನಗಳ ಮೂಲಕ ಸಂಪರ್ಕಿಸುತ್ತೇವೆ. ಈ ಸಭೆಯಲ್ಲಿ ನಾವು “ನಂಬಿಕೆಯೇ ಇಲ್ಲದಿರುವುದು” ವಿಚಾರದ ನೆಟ್‌ವರ್ಕ್ ಸೆಕ್ಯುರಿಟಿ ಮತ್ತು ಅಪ್ಲಿಕೇಷನ್ ಸೆಕ್ಯುರಿಟಿ ಎಂಬ ಎರಡು ಆಧಾರಗಳನ್ನು ಪರಿಚಯಿಸುತ್ತೇವೆ.
ಇದು ಯಾರಿಗೆ?:
ಮೂಲಭೂತ ಕಂಪ್ಯೂಟರ್ ತಿಳಿವಳಿಕೆ ಮತ್ತು ಕಂಪ್ಯೂಟರ್, ಫೋನ್ ಅಥವಾ ಇನ್ನಾವುದೇ ಸ್ಮಾರ್ಟ್ ಡಿವೈಸನ್ನು ಹೊಂದಿರುವ ಯಾವುದೇ ನಾಗರಿಕರು ಇದರಲ್ಲಿ ಭಾಗಿಯಾಗಬಹುದು.
ಭಾಗಿಯಾಗುವವರಿಗೆ ಪ್ರಯೋಜನಗಳು:
- ನೆಟ್‌ವರ್ಕ್ ಸೆಕ್ಯುರಿಟಿ ಅಂಶಗಳ ಬಗ್ಗೆ ತಿಳಿವಳಿಕೆ
- ಇನ್ನು ಮುಂದೆ ಸ್ಥಳವನ್ನು ಹಂಚಿಕೊಳ್ಳದಂತೆ ನೆಟ್‌ವರ್ಕ್‌ಗಳನ್ನು ಸುರಕ್ಷಿತಗೊಳಿಸಲು ಬಳಸಲಾಗುವ ಹಲವಾರು ಪರಿಕಲ್ಪನೆಗಳ ತಿಳಿವಳಿಕೆ
- ಅಪ್ಲಿಕೇಶನ್‌ಗಳನ್ನು ಸುರಕ್ಷಿತಗೊಳಿಸ ಬೇಕಾದ ಅಗತ್ಯದ ತಿಳಿವಳಿಕೆ
- ಅಪ್ಲಿಕೇಶನ್‌ಗಳನ್ನು ಸುರಕ್ಷಿತಗೊಳಿಸಲು ಬಳಸುವ ಪ್ರಮುಖ ಪರಿಕಲ್ಪನೆಗಳು ಮತ್ತು ತಂತ್ರಗಳ ವರ್ಣನೆ
ದಿನಾಂಕ: 13 ಮೇ 20
ಸಮಯ: ಸಂಜೆ 4: 30-5: 45
ಪ್ರಶ್ನೋತ್ತರ: ಸಂಜೆ 5: 45-6: 15
ನಂತರ ಮೌಲ್ಯಮಾಪನ ಪರೀಕ್ಷೆ . ಇದರಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು