ನಮ್ಮ ಕುರಿತು
೨೦೧೭ರಲ್ಲಿ ಕರ್ನಾಟಕ ಸರ್ಕಾರವು ತನ್ನ ತಂತ್ರಜ್ಞಾನ ಸೃಜನಶೀಲತೆ ಕಾರ್ಯತಂತ್ರದ ಭಾಗವಾಗಿ, ಕೈಗಾರಿಕಾ ಸಹಯೋಗಕ್ಕಾಗಿ ಅನುಕೂಲಕರ ಹಾಗೂ ಸೈಬರ್ ಸುರಕ್ಷಿತ ವಾತಾವರಣವನ್ನು ಉತ್ತೇಜಿಸಲು, ಕೌಶಲ್ಯ ಅಂತರಗಳನ್ನು ನಿವಾರಿಸಲು ಮತ್ತು ಸೈಬರ್ ಭದ್ರತೆಯ ಈ ಉದಯೋನ್ಮುಖ ಕ್ಷೇತ್ರದಲ್ಲಿ ಅರಿವು ಮತ್ತು ಸೃಜನಶೀಲತೆ ಉಂಟುಮಾಡಲು ಸೈಬರ್ ಸೆಕ್ಯುರಿಟಿಯಲ್ಲಿ CoE ಅನ್ನು ರಚಿಸಿತು.
ಉನ್ನತಜ್ಞಾನ ಕೇಂದ್ರವು, ಕೈಗಾರಿಕಾ ಕ್ಷೇತ್ರಗಳಲ್ಲಿ ಮಾಹಿತಿ ಸುರಕ್ಷತೆಗೆ ಪ್ರಮಾಣೀಕರಣ ಮತ್ತು ಅತ್ಯುತ್ತಮ ಕಾರ್ಯವಿಧಾನಗಳನ್ನು ಅನುವುಮಾಡುವುದಲ್ಲದೆ, ಸೃಜನಶೀಲತೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಸೈಬರ್ ಸೆಕ್ಯುರಿಟಿ ತಂತ್ರಜ್ಞಾನದೊಳಗೆ ಕೆಲವು ಉನ್ನತ-ಮಟ್ಟದ ಆಂತರಿಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ.
ಉದ್ದೇಶ
ಕರ್ನಾಟಕವನ್ನು ಸೈಬರ್ ಸುರಕ್ಷತೆಯ ಒಂದು ತಂತ್ರಜ್ಞಾನ ಕೇಂದ್ರವನ್ನಾಗಿ ಹಾಗೂ ಎಲ್ಲರಿಗೂ ಸೈಬರ್ ಸುರಕ್ಷತೆಯನ್ನು ಖಚಿತಗೊಳಿಸುವುದು.
ಗುರಿ
ಉದ್ದೇಶವನ್ನು ಈ ಕೆಳಕಂಡವುಗಳ ಮೂಲಕ ಅರಿಯುವುದು
- ಸೈಬರ್ ಭದ್ರತಾ ತಿಳಿವಳಿಕೆ ಮತ್ತು ಸಾಮರ್ಥ್ಯ ಬೆಳವಣಿಗೆ
- ಸೈಬರ್ ಭದ್ರತೆ ಪ್ರಚಾರ ಮತ್ತು ಅರಿವು ಮುಂದೊಡಗುಗಳು
- ಅತ್ಯಾಧುನಿಕ ಸಂಶೋಧನೆ ಮತ್ತು ಬೆಳವಣಿಗೆ
- ಸೈಬರ್ ಭದ್ರತೆಯಲ್ಲಿ ಹುರುಪಿನ ಸ್ಟಾರ್ಟ್ಅಪ್ ವಾತಾವರಣವನ್ನು ಉಂಟುಮಾಡುವುದು
- ಉದ್ದಿಮೆಗಳೊಂದಿಗೆ ಗಾಢ ಸಂಪರ್ಕ ಕಲ್ಪಿಸುವುದು
- ಸದೃಢ ಅಂತರರಾಷ್ಟ್ರೀಯ ಸಹಯೋಗ ಕಲ್ಪಿಸುವುದು
CoE ತಂಡ
ಕೇಂದ್ರದ ಮುಖ್ಯಸ್ಥ: ಶ್ರೀ ಕಾರ್ತಿಕ್ ಬಪ್ಪನಾಡ್
ಕಾರ್ತಿಕ್ ರವರು ತಂತ್ರಜ್ಞಾನ, ನೀತಿ ಮತ್ತು ನೈತಿಕತೆಯ ಸಹಸಂಬಂಧದ ಕುರಿತು ಕೆಲಸ ಮಾಡಲು ಇಚ್ಛಿಸುತ್ತಾರೆ.
ಅವರು ಎರಡು ದಶಕಗಳ ಕಾಲದ ಮಾಹಿತಿ ತಂತ್ರಜ್ಞಾನ ಮತ್ತು ಕಳೆದ ಆರು ವರ್ಷಕಾಲ ಸೈಬರ್ ಸುರಕ್ಷತೆಯಲ್ಲಿ ಅನುಭವವನ್ನು ಹೊಂದಿದ್ದಾರೆ. ಸೈಬರ್ ನಿಯಂತ್ರಣ, ಗುರುತಿಸುವಿಕೆ(ಐಡೆಂಟಿಟಿ) ಮತ್ತು ಸಿಗುವಿಕೆ ನಿರ್ವಹಣೆ(ಆಕ್ಸೆಸ್ ಮ್ಯಾನೇಜ್‌ಮೆಂಟ್), ಸೈಬರ್ ವಿಪತ್ತು ನಿರ್ಧಾರಣೆ(ರಿಸ್ಕ್ ಅಸೆಸ್‌ಮೆಂಟ್ಸ್) ಮತ್ತು ಜಿಆರ್‌ಸಿಗಳಂತಹ ಮುಂತಾದ ವಿವಿಧ ವಲಯಗಳಲ್ಲಿ ಸಂಪೂರ್ಣ ಸೈಬರ್ ಭದ್ರತಾ ಕಾರ್ಯಕ್ರಮಗಳನ್ನು ಅವರು ನಿರ್ವಹಿಸಿದ್ದಾರೆ. ಭವಿಷ್ಯದ ಕಾರ್ಯಾಚರಣೆ ವಿಧಾನ ಸ್ಥಾಪನೆ, ಸೇವಾ ಪರಿವರ್ತನೆ, ಘಟನೆ ನಿರ್ವಹಣೆ, ಸಮಸ್ಯೆ ನಿರ್ವಹಣೆ, ಬದಲಾವಣೆ ನಿರ್ವಹಣೆ, ಬೇಡಿಕೆ ಮತ್ತು ಸಾಮರ್ಥ್ಯ ನಿರ್ವಹಣೆ, ತಿಳಿವಳಿಕೆ ನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಗಳನ್ನೂ ಸೇರಿದಂತೆ ಅಳವಡಿಕೆ ನೀಡಿಕೆ ಮತ್ತು ಐಟಿ ಸೇವಾ ವಿತರಣಾ ಪ್ರಕ್ರಿಯೆಗಳಲ್ಲಿ ಅವರು ವ್ಯಾಪಕ ಅನುಭವ ಹೊಂದಿದ್ದಾರೆ.
ಅವರು ಸಾರ್ವಜನಿಕ ನೀತಿ ಮತ್ತು ನೀತಿ ವಿಶ್ಲೇಷಣೆ ಬಗ್ಗೆ ಮತ್ತು ಸಾರ್ವಜನಿಕ ನೀತಿಗಳಿಂದ ಪರಿಣಾಮಕಾರಿ ಫಲಿತಾಂಶಗಳು ಹೊರಹೊಮ್ಮಬೇಕೆನ್ನುವ ಜ್ಞಾನ ಮತ್ತು ಪ್ರಾಯೋಗಿಕ ಅನುಷ್ಠಾನದ ಕುರಿತು ಕೂಡ ತೀವ್ರ ಆಸಕ್ತಿ ಹೊಂದಿದ್ದಾರೆ.
ಉದ್ದಿಮೆ ಮತ್ತು ಸ್ಟಾರ್ಟ್ಅಪ್ಗಳಿಗಾಗಿ ಗುಂಪು ಮುಂದಾಳತ್ವ: ಡಾ. ರಾಜೀವ್ ಗೋಪಾಲಕೃಷ್ಣ
ಡಾ. ರಾಜೀವ್ ಗೋಪಾಲಕೃಷ್ಣರವರು ಭಾರತೀಯ ವಿಜ್ಞಾನ ಸಂಸ್ಥೆಯ ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್ ಎಕ್ಸಲೆನ್ಸಿನಲ್ಲಿ ಕರ್ನಾಟಕ ಸರ್ಕಾರದ ಸ್ಟಾರ್ಟ್ಅಪ್ಗಳು ಮತ್ತು ಉದ್ಯಮ ಮುಂದೊಡಗಿನ ಮುಖ್ಯಸ್ಥರಾಗಿದ್ದಾರೆ. ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಏಳು ವರ್ಷಗಳ ಶೈಕ್ಷಣಿಕ ಸಂಶೋಧನೆ, ಅಮೆರಿಕದ ಇಂಟೆಲ್ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಕಾರ್ಪೊರೇಟ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಸೆಕ್ಯುರಿಟಿ ಆರ್ಕಿಟೆಕ್ಟ್ ಮತ್ತು ಸ್ಟ್ರಾಟಜಿಸ್ಟ್ (ಕಾರ್ಯತಂತ್ರಗಾರ) ಕೆಲಸ ಮತ್ತು ಸಿಂಗಾಪುರ ಮತ್ತು ಭಾರತದಲ್ಲಿ ಐದು ವರ್ಷಗಳ ಸ್ಟಾರ್ಟ್ಅಪ್ ನಾಯಕತ್ವ ವಹಿಸಿ ಸೈಬರ್ ಸೆಕ್ಯುರಿಟಿ ಅನುಭವವನ್ನು ಅವರು ಹೊಂದಿದ್ದಾರೆ.
ಕಾರ್ಯಾಚರಣೆ ವ್ಯವಸ್ಥಾಪಕ(ಆಪರೇಷನ್ ಮ್ಯಾನೇಜರ್): ಶ್ರೀ ಮೀರ್ ಜಹೀರ್ ಅಬ್ಬಾಸ್
ಮೀರ್ ಜಹೀರ್ ಅಬ್ಬಾಸ್ ರವರು ಐಟಿ ಉದ್ಯಮದಲ್ಲಿ 15ವರ್ಷಗಳಿಗೂ ಹೆಚ್ಚು ಕಾಲ ಅನುಭವವನ್ನು ಹೊಂದಿದ್ದು, ಸೈಬರ್ ಸೆಕ್ಯುರಿಟಿ ಇನ್ ಸೆಂಟರ್ ಆಫ್ ಎಕ್ಸಲೆನ್ಸಿನಲ್ಲಿ ಒಂದೂವರೆ ವರ್ಷ ಕಾಲ ಆಪರೇಷನ್ ಮ್ಯಾನೇಜರಾಗಿರುವ ಅನುಭವಹೊಂದಿದ್ದಾರೆ.