ವಿಷಯ: “ಮೆಲ್ಟ್ ಡೌನ್ ಅಂಡ್ ಸ್ಪೆಕ್ಟರ್” ಕುರಿತು ವೆಬಿನಾರ್ - ಸಂಗಚ್ಛಧ್ವಂ ಸರಣಿ ವೆಬಿನಾರ್ 9

ದಿನಾಂಕ: 20 May 2020

ಪಾಲುದಾರನನ್ನು ಸಂಘಟಿಸುವುದು: CySeck


ಮಾನ್ಯರೇ,

ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ – “ಮೆಲ್ಟ್ ಡೌನ್ ಅಂಡ್ ಸ್ಪೆಕ್ಟರ್” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು /  ವೃತ್ತಿನಿರತರರಿಗೆ ಉಚಿತ ವೆಬಿನಾರನ್ನು ಸೈಸೆಕ್ (CySecK) ನಡೆಸುತ್ತಿದೆ.

ಈ ವೆಬಿನಾರ್‌ನ ಸ್ವರೂಪ:

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಪ್ರೊ. ವಿನೋದ್ ಗಣಪತಿಯವರು https://www.youtube.com/watch?v=JXU8VykmPz0 ವೆಬಿನಾರ್ ನಲ್ಲಿ ನೀವು ನೋಡಬಹುದಾದ ರೆಕಾರ್ಡ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ

20 ಮೇ 2020 ರ  ಸಂಜೆ 4:30 ರಿಂದ 5:30 ರವರೆಗೆ ಪ್ರಶ್ನೋತ್ತರ ಸಭೆಯಿರುತ್ತದೆ. ಇಲ್ಲಿ ಪ್ರೊ.ವಿನೋದ್ ಗಣಪತಿಯವರು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

 

ನೋಂದಣಿ ಲಿಂಕ್: https://meeting.zoho.in/meeting/register?sessionId=1399871137

ನಂತರ   ಮೌಲ್ಯಮಾಪನ ಪರೀಕ್ಷೆ ಇರುತ್ತದೆ. ಇದರಲ್ಲಿ ಪಾಸಾದವರಿಗೆ  ಪ್ರಮಾಣಪತ್ರವನ್ನು ನೀಡಲಾಗುವುದು.

 

ಸಣ್ಣ ಪರಿಚಯ / ಸಾರಾಂಶ:

ಈ ಭಾಷಣದಲ್ಲಿ   2018 ರ ಆರಂಭದಲ್ಲಿ ಇಂಟೆಲ್ x86 ಪ್ರೊಸೆಸರ್‌ಗಳ ಮೇಲೆ ಪರಿಣಾಮ ಬೀರಿದ ಮೆಲ್ಟ್ಡೌನ್  ದಾಳಿಯ ಬಗ್ಗೆ  ವಿವರಿಸಲಾಗುತ್ತದೆ  ಹಾಗೂ ಸ್ಪೆಕ್ಟರ್ ದಾಳಿಯ ಬಗ್ಗೆ ಸ್ವಲ್ಪ ಹೇಳಲಾಗುತ್ತದೆ.  ಈ ದಾಳಿಗಳು ಪ್ರೊಸೆಸರ್ ಉದ್ದಿಮೆಯನ್ನು ಕಾಡಲಾರಂಭಿಸಿರುವ ಹೊಸ ಸರಣಿ ದಾಳಿಯ    ಮೊದಲನೆಯವು  – ಅವುಗಳೆಂದರೆ, ಒಂದು ನಿರ್ದಿಷ್ಟ ಚಟುವಟಿಕೆಯನ್ನು ಮುಗಿಸಲು ಒಂದು ಪ್ರೊಸೆಸರ್ ತೆಗೆದುಕೊಳ್ಳುವ ಸಮಯವನ್ನು ಕೇವಲ  ಗಮನಿಸುವುದರ ಮೂಲಕ ದಾಳಿಗಾರ  ಒಂದು ರಹಸ್ಯ ಮಾಹಿತಿಯನ್ನು ಊಹಿಸಲು ಅವಕಾಶ ನೀಡುವಂತಹ ಟೈಮಿಂಗ್ -ಚಾನಲ್‌ಗಳು.

ಇದು ಯಾರಿಗೆ?:

ಆಪರೇಟಿಂಗ್ ಸಿಸ್ಟಂಗಳು ಮತ್ತು ಕಂಪ್ಯೂಟರ್ ವಿನ್ಯಾಸದ  ಕುರಿತು ಮೂಲ ಪದವಿಪೂರ್ವ ಕೋರ್ಸನ್ನು ಮುಗಿಸಿದ ಯಾರಾದರೂ ಇದರಲ್ಲಿ ಭಾಗಿಯಾಗಬಹುದು.

 

ಪ್ರಯೋಜನಗಳು:

1.ಹೇಗೆ  ರಹಸ್ಯ ಸಮಯ-ಚಾನಲ್ ದಾಳಿಗಳು (covert timing-channel attacks)  ಕೆಲಸಮಾಡುತ್ತದೆಂಬುದರ ಬಗ್ಗೆ  ತಿಳಿವಳಿಕೆ

  1. ರಹಸ್ಯ ಸಮಯ-ಚಾನಲ್ ದಾಳಿಗಳು (covert timing-channel attacks ) ಬಳಸುವ ವಿಧಾನಗಳ ಬಗ್ಗೆ ತಿಳಿವಳಿಕೆ
  2. ಎಲ್ಲೆಲ್ಲಿ ಅನ್ವಯಿಸುತ್ತದೋ ಆ ಮೂಲಭೂತ ರಕ್ಷಣೆಗಳ ಬಗ್ಗೆ ತಿಳಿವಳಿಕೆ

ದಿನಾಂಕ: 20 ಮೇ 2020

ಸಮಯ: ಸಂಜೆ 4:30 ರಿಂದ 5:30